ಬೆಳಗಾವಿ: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಕೇಂದ್ರ ಗೃಹ ಸಚಿವಾಲಯದಿಂದ ನೀಡಲಾಗುವ ಪ್ರತಿಷ್ಠಿತ ವಿಶಿಷ್ಟ ಸೇವಾ ಪದಕಕ್ಕೆ ಬಿ.ಆರ್. ಗಡ್ಡೇಕರ್ ಸರ್ ಅವರು ಭಾಜನರಾಗಿದ್ದಾರೆ.
ಕರ್ತವ್ಯನಿಷ್ಠೆ, ದಕ್ಷತೆ ಹಾಗೂ ಸೇವಾ ಬದ್ಧತೆಯಿಂದ ಪೊಲೀಸ್ ಇಲಾಖೆಯಲ್ಲಿ ಗುರುತಿಸಿಕೊಂಡಿರುವ ಗಡ್ಡೇಕರ್ ಅವರ ಸಾಧನೆಗೆ ಈ ಗೌರವ ಸಂದಿರುವುದು ಹೆಮ್ಮೆಯ ಸಂಗತಿಯಾಗಿದೆ.
ದೇಶದ ಆಂತರಿಕ ಭದ್ರತೆ ಹಾಗೂ ಸಾರ್ವಜನಿಕರ ರಕ್ಷಣೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಪೊಲೀಸ್ ಅಧಿಕಾರಿಗಳ ಸೇವೆಗೆ ಸಂದಿರುವ ಈ ಗೌರವವು ಇಲಾಖೆಯ ಗೌರವವನ್ನು ಹೆಚ್ಚಿಸಿದೆ.
ಗಡ್ಡೇಕರ್ ಅವರಿಗೆ ಈ ಪ್ರತಿಷ್ಠಿತ ಪದಕ ಲಭಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಗಣ್ಯರು, ಸ್ನೇಹಿತರು ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
**ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ:**
ಬಿ.ಆರ್. ಗಡ್ಡೇಕರ್ ಸರ್ ಅವರ ಸೇವಾ ಸಾಧನೆಗೆ ಕೇಂದ್ರ ಗೃಹ ಸಚಿವಾಲಯದ ಈ ಗೌರವ ಮತ್ತಷ್ಟು ಮೆರುಗು ನೀಡಿದ್ದು, ಅವರ ಮುಂದಿನ ಸೇವಾ ಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಕ್ರಾಂತಿ ಕರ್ನಾಟಕ ನ್ಯೂಸ್ ಬಳಗ ಹಾರೈಸುತ್ತದೆ.
ಕ್ರಾಂತಿ ಕರ್ನಾಟಕ ನ್ಯೂಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.


