ಮೂಡಲಗಿ: ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಶಾಲೆಗೆ ಮನೆಗೆ ಬಿಡುವ ಶಾಲಾ ವಾಹನ ಚಾಲಕರ ಜವಾಬ್ದಾರಿ ದೊಡ್ಡದು ಆದರೆ ಸಮರ್ಥ ಸ್ಕೂಲ್ ನಾಗನೂರ್ ಶಾಲಾ ವಾಹನ ಚಾಲಕ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವಾಗ ಚಾಲಕನ ನಿರ್ಲಕ್ಷದಿಂದ ಬುಧವಾರ ಸಂಜೆ ನಾಲ್ಕು ವರ್ಷದ ಬಾಲಕನ ಮೇಲೆ ವಾಹನವೊಂದು ಹರಿದು ಸಾವಣಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದ ಹೊರವಯದಲ್ಲಿ ನಿಪ್ಪಾಣಿ ಮುದೋಳ ರಸ್ತೆ ನಡುವೆ ನಡದಿದೆ.
ಶಂಕರ ಮಲ್ಲಪ್ಪ ಮುಗಳಕೋಡ ಎಂಬ 4 ವರ್ಷದ ಬಾಲಕ ಎಂದಿನಂತೆ ಸಮರ್ಥ ಸ್ಕೂಲ್ ನಾಗನೂರ್ ಶಾಲೆಗೆ ಹೋಗಿ ಬರುತ್ತಿದ್ದ ಮನೆ ಹತ್ತಿರ ಬರುತ್ತಿದ್ದಂತೆ ಬಾಲಕನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕಿದ್ದ, ವಾಹನದ ಚಾಲಕ ಮತ್ತು ಆಡಳಿತ ಮಂಡಳಿಯವರುರ ರಸ್ತೆ ಮೇಲೆ ಮಗುವನ್ನು ಬಿಟ್ಟು ಎಡವಟ್ಟು ಮಾಡಿದ್ದಾರೆ.
ಶಾಲಾ ವಾಹನ ಇಳಿದು ರಸ್ತೆ ಕ್ರಾಸ್ ಮಾಡಿ ಮನೆಗೆ ಹೋಗಬೇಕಾದರೆ ಯಮನಂತೆ ಬಂದ ಬೈಕ್ ಚಾಲಕ ಡಿಕ್ಕಿ ಹೊಡೆದು ಬಾಲಕನನ್ನು ಎಳೆದೋಯ್ದು ರಸ್ತೆ ಮೇಲೆ ಬಿಟ್ಟಿದೆ ಅಷ್ಟರಲ್ಲೇ ಮತ್ತೊಂದು ವಾಹನ ಬಂದು ಪುಟ್ಟ ಮಗುವಿನ ಮೇಲೆ ಹಾಯಿಸಿ ಗಾಡಿ ನಿಲ್ಲಸದೇ ಪರಾರಿಯಾಗಿದ್ದಾನೆ.
ರಸ್ತೆ ಮೇಲೆ ಹೋಗುವ ವಾಹನ ಸವಾರರು ಮೃತ ದೇಹ ಕಂಡು ಮರುಗಿದ್ದಾರೆ ಅಷ್ಟೇ ಅಲ್ಲದೆ ಶಾಲೆಯ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Recent Comments