ಕಂಕಣವಾಡಿ: ರಾಯಬಾಗ ಮತಕ್ಷೇತ್ರದ ಶಾಸಕರಾದ ದುರ್ಯೋಧನ ಐಹೋಳೆ ಅವರ ಕ್ಷೇತ್ರದಲ್ಲಿ ಬರುವ ರಾಯಭಾಗ ತಾಲೂಕಿನ ದೇವಪುರಹಟ್ಟಿ ಕ್ರಾಸ್-ಕಂಕಣವಾಡಿ ಪಟ್ಟಣದ ನಡುವಿನ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ರಾಯಬಾಗ ಮತಕ್ಷೇತ್ರದ ಶಾಸಕ ದುರ್ಯೋಧನ ಐಹೋಳೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಏನ್ ಮಾಡುತ್ತಿದ್ದಾರೆ ಅನ್ನೋದು ಸುಮಾರು ವರ್ಷಗಳಿಂದ ಸಾರ್ವಜನಿಕರ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ.
ದೇವಪೂರಹಟ್ಟಿ ಕ್ರಾಸ್ ದಿಂದ ಕಂಕಣವಾಡಿ ವರೆಗೆ ಹದಗೆಟ್ಟ ರಸ್ತೆಯಿಂದ ನಿತ್ಯ ತೆರಳುವ ವಾಹನಗಳು ಹಾಗೂ ಕಂಕಣವಾಡಿ ಪಟ್ಟಣದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ವಾಹನ ಸವಾರರು, ರಸ್ತೆಯಲ್ಲಿ ಬಿದ್ದಿರುವ ತಗ್ಗುಗುಂಡಿಗಳ ಜೊತೆಗೆ ಸಾಗುವ ದುರಸ್ಥಿತಿ ಎದುರಾಗಿದೆ. ಮಳೆಗೆ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಗುಂಡಿ ತಪ್ಪಿಸಲು ಹೋಗಿ ಅಪಘಾತಗಳಾಗುತ್ತಿದೆ.
ಕಂಕಣವಾಡಿ ಮಾರ್ಗವಾಗಿ ರಾಯಬಾಗ ಗೋಕಾಕ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕಳೆದ ಕೆಲ ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಇನ್ನೂ ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.
ಈ ರಸ್ತೆ ಯಾವಾಗ ದುರಸ್ತಿಯಾಗುತ್ತದೆ ಎಂದು ಜನಸಾಮಾನ್ಯರು ಕಾದು ಕುಳಿತಿದ್ದಾರೆ. ಸಂಚರಿಸಬೇಕಾದ ಜನರು ಹದಗೆಟ್ಟ ರಸ್ತೆಗೆ ಹೆದರಿ ವಾಹನ ರಸ್ತೆಯಲ್ಲಿ ತಗ್ಗು, ಗುಂಡಿಗಳು ಬಿದ್ದಿರುವುದರಿಂದ ಸವಾರರು ಗುಂಡಿ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು, ಅಪಘಾತಗಳಾಗಿವೆ. ಅನಾರೋಗ್ಯ ಪೀಡಿತರು, ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸುವುದು ತ್ರಾಸದಾಯಕವಾಗಿದೆ.
ಈ ರಸ್ತೆಯನ್ನು ಶೀಘ್ರದಲ್ಲಿಯೇ ಅಧಿಕಾರಿಗಳು ದುರಸ್ತಿ ಮಾಡಿ ಸುಗಮಸಂಚಾರ ಕಲ್ಪಿಸಿಕೊಡಬೇಕು. ರಾಯಭಾಗ ಮತಕ್ಷೇತ್ರದ ಶಾಸಕ ಐಹೊಳೆ ಕೂಡಾ ಈ ಕಡೆ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ನಮ್ಮ ವಾಹಿನಿ ಮುಖಾಂತರ ಸಾರ್ವಜನಿಕರು, ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.
ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments