HomeUncategorizedNewsಬೆಳಗಾವಿ ಸಿಸಿಬಿ ವಿಭಾಗದ ಪೊಲೀಸರಿಂದ ಮಟಕಾ ಅಡ್ಡೆ ಮೇಲೆ ದಾಳಿ; ರೂ.81,820/- ಹಣ ಜಪ್ತ, 17...

ಬೆಳಗಾವಿ ಸಿಸಿಬಿ ವಿಭಾಗದ ಪೊಲೀಸರಿಂದ ಮಟಕಾ ಅಡ್ಡೆ ಮೇಲೆ ದಾಳಿ; ರೂ.81,820/- ಹಣ ಜಪ್ತ, 17 ಜನ ವಶಕ್ಕೆ

ಬೆಳಗಾವಿ: ಶಹಾಪೂರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ 11/09/2026 ರಂದು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಂಜುನಾಥ ನಾಯಿಕ ಪಿ.ಐ ಸಿಸಿಬಿ ವಿಭಾಗ ರವರ ನೇತೃತ್ವದ ತಂಡದಿಂದ ಮಟಕಾ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ.

ಶಹಾಪೂರ ಠಾಣಾ ವ್ಯಾಪ್ತಿಯ ಮನೆ ನಂ.36 ಕಲೇಶ್ವರ ರಸ್ತೆ, ವಡಗಾಂವಿಯಲ್ಲಿ ಹಣ ಹಚ್ಚಿ ಮಟಕಾ ಆಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ದಾಳಿ ಕಾಲಕ್ಕೆ ಆರೋಪಿತರಿಂದ ರೂ.81,820/- ಹಣ ಹಾಗೂ ಓಸಿ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ಜಪ್ತಪಡಿಸಿಕೊಂಡು ಅವರ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಪ್ರ. ಸಂ. 128/2026 ಕಲಂ. 79, 80 ಕೆ.ಪಿ. ಕಾಯ್ದೆ – 1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ಆ ಸಂದರ್ಭದಲ್ಲಿ ಆರೋಪಿತರಾದ 1) ದಿನೇಶ ಪ್ರದೀಪ ಇಂಗಳೆ (54) ಸಾ|| ಹಿಂದವಾಡಿ ಬೆಳಗಾವಿ 2) ಕೃಷ್ಣಾ ಮಹಾದೇವ ಜಾಧವ (45) ಸಾ॥ ಕಶ್ವರ ರಸ್ತೆ, ವಡಗಾಂವ 3)ರಾಹುಲ ಪಾಂಡುರಂಗ ಕುಡುಸ್ಕರ್ (40) ಮಹಾದ್ವಾರ ರಸ್ತೆ, ಬೆಳಗಾವಿ 4) ಫಿರೋಜಖಾನ ಸುಲೇಮಾನ ಸುರೈಯಾಪೆಂಡಾರಿ (39) ಸಾ।। ಶಿವಶಕ್ತಿನಗರ, ಅನಗೋಳ, ಬೆಳಗಾವಿ 5) ಬಾಲಚಂದ್ರ ದತ್ತಾ ಬಡಸಕರ (42) ಸಾ।। ಕಶ್ವರ ರಸ್ತೆ, ವಡಗಾಂವ 6) ರವೀಂದ್ರ ಕಟಾವಕರ ಸಾ।। ಬೆಳಗಾವಿ 7) ಗಜಾನನ ಮಾರುತಿ ಕಂಗ್ರಾಳಕರ (50) ಪಾಟೀಲ ಗಲ್ಲಿ, ಬೆಳಗಾವಿ 8) ಅಝರುದ್ದೀನ ಗೌಸ್ ಮಿರ್ಜಾಭಾಯಿ (48) ದೇವಾಂಗ ನಗರ, ವಡಗಾಂವ 9) ಮಾರುತಿ ನಾನಾ ದಳವಿ (56) ಕಲೇಶ್ವರ ರೋಡ, ವಡಗಾಂವ 10) ಸಾಧಿಕ ಯುನುಸ ಚಾಫಗಾಂವಕರ (40) ರಾಜಹಂಸ ಗಲ್ಲಿ, ಅನಗೋಳ 11) ಸದಾನಂದ ಮಹಾದೇವ ಕಾಮಕರ (56) ಕಶ್ವರ ರೋಡ, ವಡಗಾಂವಿ 12) ಸಂಜು ಶಿವಲಿಂಗ ಹಾದಿಮನಿ (38) ಸಾ।। ಮಂಗಾಯಿ ನಗರ, ವಡಗಾಂವಿ 13) ಈಶ್ವರ ರಾಮಕೃಷ್ಣ ಲೋಕುರೆ (65) ಸಾ।। ಮಂಗಾಯಿ ನಗರ, ವಡಗಾಂವಿ 14) ರಾಜು ಯಲ್ಲಪ್ಪ ಕಡೋಲ್ಕರ (35) ಸಾಗಣೇಶ ಪೇಠ ಜುನ್ನೆ ಬೆಳಗಾವಿ 15) ಅನಿಲ ಕಲ್ಲಪ್ಪ ಬಾಳೆಕುಂದ್ರಿ (36) ಪಾಟೀಲ ಗಲ್ಲಿ, ವಡಗಾಂವಿ 16) ಸಂಗಪ್ಪ ಶಂಕರಪ್ಪ ಚಾವಲಗಿ (65) ಸಾ।। ದೇವಾಂಗ ನಗರ, ವಡಗಾಂವ 17) ಜನಾರ್ಧನ ಸಂಜು ಪೂಜಾರಿ (38) ಸಂಭಾಜಿ ನಗರ, ಬೆಳಗಾವಿ ಇವರೆಲ್ಲ ಸೇರಿ ತಮ್ಮ ಲಾಭಕ್ಕಾಗಿ ಶಹಾಪೂರ ಠಾಣಾ ವ್ಯಾಪ್ತಿಯಲ್ಲಿ ಬರುವ ಮನೆ ನಂ.36 ಕಲೇಶ್ವರ ರಸ್ತೆ, ವಡಗಾಂವಿಯಲ್ಲಿ ಹಣ ಹಚ್ಚಿ ಮಟಕಾ ಆಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.

ಮೇಲಿನಂತೆ ದಾಳಿ ಕೈಗೊಂಡ ಸಿಸಿಬಿ ವಿಭಾಗದ ಮಂಜುನಾಥ ನಾಯಿಕ ಪಿಐ, ಮಂಜುನಾಥ ಭಜಂತ್ರಿ ಪಿಎಸ್‌ಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪ್ರಸಂಶಿಸಲಾಯಿತು.

RELATED ARTICLES
- Advertisment -spot_img

Most Popular

Recent Comments