HomeUncategorizedಕಣ್ಣು ಮುಚ್ಚಿದೆಯಾ ನಗರಕೆರೆ ಪಂಚಾಯಿತಿ? ರಸ್ತೆ ಪಕ್ಕದಲ್ಲೇ ಬಾಯಿ ತೆರೆದ ಕೈಪಂಪು ಗುಂಡಿ–ಜಾಗ್ರತೆ!

ಕಣ್ಣು ಮುಚ್ಚಿದೆಯಾ ನಗರಕೆರೆ ಪಂಚಾಯಿತಿ? ರಸ್ತೆ ಪಕ್ಕದಲ್ಲೇ ಬಾಯಿ ತೆರೆದ ಕೈಪಂಪು ಗುಂಡಿ–ಜಾಗ್ರತೆ!

ನಗರಕೆರೆ ಗ್ರಾಮದ ಮೊದಲ ವಾರ್ಡ್‌ನ ಪಂಚಾಯಿತಿ ರಸ್ತೆಯಲ್ಲಿ ಸಾಗಿದರೆ ನಗರಕೆರೆ ಜನತೆಗೆ ಬಾಯಿ ತೆರೆದುಕೊಂಡು ಸ್ವಾಗತಿಸುತ್ತಿರುವ ಈ ಮುರಿದ ಕೈಪಂಪಿನ ದರ್ಶನವಾಗುತ್ತದೆ. ಅಚ್ಚರಿಯೆಂದರೆ, ಇದು ಸತತವಾಗಿ ಗೆದ್ದು ಬರುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರ ಮನೆಯ ಪಕ್ಕದಲ್ಲೇ ಇರುವ “ಅಭಿವೃದ್ಧಿ”ಯ ನೋಟ.

ದಿನನಿತ್ಯ ಪಂಚಾಯಿತಿ, ಡೈರಿ ಮತ್ತು ಸೊಸೈಟಿಗೆ ಸಾವಿರಾರು ಜನರು ಓಡಾಡುವ ಪ್ರಮುಖ ರಸ್ತೆ ಇದು. ಇದೇ ದಾರಿಯಲ್ಲಿ ಒಂದು ಸರಕಾರಿ ಹಾಗೂ ಇದೇ ಜನಪ್ರತಿನಿಧಿಗಳ ಕುಟುಂಬದ ಒಡೆತನದ ಖಾಸಗಿ ಶಾಲೆ ಕೂಡ ಇದೆ. ನೂರಾರು ಮುಗ್ಧ ಮಕ್ಕಳು ನಿತ್ಯ ಈ ಬಾಯಿ ತೆರೆದ ಅಪಾಯಕಾರಿ ಗುಂಡಿಯ ಪಕ್ಕದಲ್ಲೇ ಆಟವಾಡುತ್ತಾ ಓಡಾಡಬೇಕು. ಅಕಸ್ಮಾತ್ ಕಾಲು ಜಾರಿದರೆ ಹೊಣೆಗಾರರು ಯಾರು?

ಇಷ್ಟೆಲ್ಲಾ ಅಪಾಯವಿದ್ದರೂ ಊರ ಮಂದಿ ಯಾರೂ ತುಟಿ ಬಿಚ್ಚುತ್ತಿಲ್ಲ. ಕಾರಣ ಸರಳ, ಏನಾದರೂ ಪ್ರಶ್ನೆ ಮಾಡಿದರೆ, ಪಂಚಾಯಿತಿಯಲ್ಲಿ ಆಗಬೇಕಾದ ಜನಸಾಮಾನ್ಯರ ಕೆಲಸಗಳಿಗೆ ಎಲ್ಲಿ ‘ಅನಗತ್ಯ ಬ್ರೇಕ್’ ಬೀಳುತ್ತದೆಯೋ ಎಂಬ ದಿಗಿಲು. ಪ್ರಶ್ನಿಸುವವರ ದನಿಯನ್ನು ಪರೋಕ್ಷವಾಗಿ ದೂರು ನೀಡುವ ಮೂಲಕ ಅಡಗಿಸಿರುವ ವ್ಯವಸ್ಥೆಗೆ ಒಂದು ದೊಡ್ಡ ನಮಸ್ಕಾರ.

ದಯವಿಟ್ಟು ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಆ ‘ಕೂಲಿಂಗ್ ಗ್ಲಾಸ್’ ತೆಗೆದು, ವಾಸ್ತವಕ್ಕೆ ಬಂದು ಈ ಅಪಾಯಕಾರಿ ಗುಂಡಿಯನ್ನು ಮುಚ್ಚಿಸುವ ಪುಣ್ಯದ ಕೆಲಸ ಮಾಡಿಸಿ. ಶಾಲಾ ಮಕ್ಕಳ ಪ್ರಾಣಕ್ಕೇ ಕುತ್ತು ಬರುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು. “ನಿಮ್ಮ ಊರಲ್ಲೂ ಇಂತಹ ತೊಡಕು ಇದೆಯಾ? ಕಾಮೆಂಟ್ ಮಾಡಿ ತಿಳಿಸಿ

RELATED ARTICLES
- Advertisment -spot_img

Most Popular

Recent Comments