ರಾಯಭಾಗ: ತಾಲ್ಲೂಕಿನ ಕಂಕಣವಾಡಿ ಪಟ್ಟಣದ ಮಹಾಲಿಂಗೇಶ್ವರ ಜಾತ್ರೆಯು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ಪರ್ಧೆಗಳು ಮತ್ತು ರಥೋತ್ಸವವು, ಗುರುವಾರ ಬೆಳಿಗೆಯಿಂದ ಸಾಯಂಕಾಲದ ವರೆಗೆ ಅಪಾರ ಭಕ್ತರ ಸಮೂಹದಲ್ಲಿ ಮಹಾಲಿಂಗೇಶ್ವರ ಜಾತ್ರೆಯು ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಯೊಂದಿಗೆ ರಥದಲ್ಲಿ ಮಹಾಲಿಂಗೇಶ್ವರ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವವು ವಿವಿಧ ವಾದ್ಯಗಳೊಂದಿಗೆ ಪ್ರಾರಂಭವಾಗಿ ಸಾಯಂಕಾಲ ರಥೋತ್ಸವ ಶ್ರೀ ಜಗದ್ಗುರು ಪಂಚಮ ಶ್ರೀ ಶಿವಾನಂದ್ ಮಹಾಸ್ವಾಮಿಗಳು ಇವರ ಅಮೃತ ಹಸ್ತದಿಂದ ನೆರವೇರಿಸಿದರು.
ರಥೋತ್ಸವ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಈಶ್ವರಲಿಂಗೇಶ್ವರ ದೇವಾಲಯದವರೆಗೆ ಸಕಲ ವಾದ್ಯಗಳೊಂದಿಗೆ ರಥೋತ್ಸವ ಮರಳಿ ಮಹಾಲಿಂಗೇಶ್ವರ ದೇವಸ್ಥಾನ ತಲುಪಿತು.
ಭಕ್ತರು ಓಂ ನಮಃ ಶಿವಾಯ, ಈಶ್ವರ ಲಿಂಗ ಮಹಾರಾಜ್ ಕಿ ಜೈ, ಮಹಾಲಿಂಗೇಶ್ವರ ಮಹಾರಾಜಕಿ ಜೈ, ಎಂದು ಜೈಕಾರ ಹಾಕಿ ದೇವರಿಗೆ ಹೂವು, ಹಣ್ಣು, ಕಾಯಿ, ಬತ್ತಾಸು ಕಾರಿಕ್, ಬೆಂಡ್, ಬಿಸ್ಕಿಟ್, ಹಾರಿಸುವ ಮೂಲಕ ಇಡೀ ಜಾತ್ರೆಗೆ ಕಳೆಕಟ್ಟಿತ್ತು.
ಜಾತ್ರೆ ಅಂಗವಾಗಿ ಬೆಳಿಗ್ಗೆಯಿಂದ ಆರಂಭವಾದ ಅನ್ನಸಂತ-ರ್ಪಣೆಯಲ್ಲಿ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಿದರು.
ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments