ಬೆಂಗಳೂರಿನ ಯಲಹಂಕದ 66/11 ಕೆವಿ ಸಬ್‌ಸ್ಟೇಷನ್‌ನಲ್ಲಿ KPTCL ತುರ್ತು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಂದು ಉತ್ತರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕಾಮಗಾರಿಯಿಂದ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ.
ಯಲಹಂಕ ನ್ಯೂ ಟೌನ್, ಕೊಗಿಲು, ಬಾಗಲೂರು ಕ್ರಾಸ್, ಹೆಬ್ಬಾಳ, ಎಂ.ಎಸ್. ಪಾಳ್ಯ, ಅಲ್ಲಾಳಸಂದ್ರ, ಶಾರದಾನಗರ, ಕತ್ತಿಗೆನಹಳ್ಳಿ, HMT ಲೇಔಟ್, ದೋಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಅತ್ತೂರು ಲೇಔಟ್ ಸೇರಿದಂತೆ 50ಕ್ಕೂ ಹೆಚ್ಚು ಪ್ರದೇಶಗಳು ಪರಿಣಾಮಕ್ಕೆ ಒಳಗಾಗುವ ಸಾಧ್ಯತೆಯಿದೆ.
ಕಾಮಗಾರಿ ಪೂರ್ಣಗೊಂಡ ನಂತರ ವಿದ್ಯುತ್ ಪೂರೈಕೆಯನ್ನು ಹಂತ ಹಂತವಾಗಿ ಪುನಃಸ್ಥಾಪಿಸುವ ನಿರೀಕ್ಷೆಯಿದೆ.
ವಿದ್ಯುತ್ ವ್ಯತ್ಯಯದಿಂದ ನೀರಿನ ಪಂಪ್, ಲಿಫ್ಟ್, ಇಂಟರ್ನೆಟ್ ಸೇವೆ ಹಾಗೂ ಇತರ ವಿದ್ಯುತ್ ಆಧಾರಿತ ಕೆಲಸಗಳಿಗೆ ತೊಂದರೆಯಾಗಬಹುದಾದ್ದರಿಂದ ನಿವಾಸಿಗಳು ಮುಂಚಿತವಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.



