Thursday, September 18, 2025
spot_img

ಹಿಟ್ & ರನ್ ಕೇಸ್… ಹಿರೇಬಾಗೇವಾಡಿ/ಕಿತ್ತೂರ ಪೊಲೀಸರ ಮಿಂಚಿನ ಕಾರ್ಯಾಚರಣೆ ಕೇವಲ 2 ಗಂಟೆಯಲ್ಲಿ ಹರಿಯಾಣಾ ಮೂಲದ ಟ್ರಕ್ ಚಾಲಕ ಅಂದರ್‌!!!

ಬೆಳಗಾವಿ: ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್‌ಹೆಚ್-48 ಪಾದಚರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಲಾರಿ ಡ್ರೈವರನ್ನು ಕೇವಲ ಎರಡು ಗಂಟೆಗಳಲ್ಲಿ ಬಂಧಿಸಿದ ಹಿರೇಬಾಗೇವಾಡಿ ಪೊಲೀಸ್ ಠಾಣೆ ಅಧಿಕಾರಿಗಳು…

ಬೆಳಗಾವಿ ನಗರ ಪೊಲೀಸ್ ಕಮಿಷನರ ಘಟಕ ಹಿರೇಬಾಗೇವಾಡಿ ಪೊಲೀಸರ ಸಮಯಪ್ರಜ್ಞೆಯಿಂದ ಹಿರೇಬಾಗೇವಾಡಿ ಎನ್‌ಹೆಚ್ 48 ಹೆದ್ದಾರಿಯಲ್ಲಿ ಪಾದಚಾರಿಗೆ ಉಮೇಶ್ ದೇಶನೂರಕರ್ (ವಯಸ್ಸು 30) ಡಿಕ್ಕಿಪಡಿಸಿ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದ ಚಾಲಕ ಆರೋಪಿ, ಹಮೀದ್ಖಾನ್ ರುಕ್ಕುದಿನ ನನ್ನು ಎರಡು ಗಂಟೆಗಳ ಒಳಗೆ ಚಾಲಕನನ್ನು ಬಂಧಿಸಿದ ಹಿರೇಬಾಗೇವಾಡಿಯ ಪೊಲೀಸ್ ಅಧಿಕಾರಿಗಳು..

ಆರೋಪಿ ಹಮೀದ್ಖಾನ ರುಕ್ಕುದ್ದೀನ್ ಎಂಬ ಚಾಲಕತ್ತನ್ನು ತನ್ನ ಟ್ರಕ್ಕನ್ನು ಜೋರಿನಿಂದ ಚಲಾಯಿಸುತ್ತಿದ್ದ, ಎನ್‌ಹೆಚ್-48 ರಸ್ತೆಯ ದಾಟುತ್ತಿದ್ದ ಉಮೇಶ್ ದೇಶನೂರಕರ ( ಸುಮಾರು 30 ವರ್ಷ) ಈತನಿಗೆ ಹಾಯಿಸಿ ಸ್ಥಳದಲ್ಲಿ ಮರಣ ಪಡಿಸಿ ಟ್ರಕ್ಕನ್ನು ನಿಲ್ಲಿಸದೆ ಓಡಿಸಿಕೊಂಡು ಹೋದ ಚಾಲಕನನ್ನು ಕೇವಲ ಎರಡು ಗಂಟೆಗಳಲ್ಲಿ ಕಿತ್ತೂರು ಪೊಲೀಸ್ ಠಾಣೆಯ ಓರ್ವಶಿಬ್ಬಂದಿ ಹಾಗೂ ಹಿರೇ ಬಾಗೇವಾಡಿ ಪಿಐ. ಶ್ರೀ ಸುರೇಶ್ ಹೊಳೆನವರ ಮತ್ತು ಎಸ್.ಬಿ.ಬಾಬಣ್ಣವರ, ಸಿಬ್ಬಂದಿಯವರ ತಂಡಪತ್ತೆ ಮಾಡಿ ವಶಕ್ಕೆ ಪಡೆದಿರುತ್ತಾರೆ

ದಿನಾಂಕ 14/06/.2025 ರಂದು ಮಧ್ಯಾಹ್ನ 01.09 ಗಂಟೆಗೆ ಸುಮಾರಿಗೆ ಹಿರಿಯ ಬಾಗೇವಾಡಿ ಠಾಣ ಅದ್ದಿಯ ರಾಷ್ಟ್ರೀಯ ಹೆದ್ದಾರಿಯಲಿ ರೇಣುಕಾ ಪೆಟ್ರೋಲ್ ಪಂಪ್ ಹತ್ತಿರ ಮೃತ ಉಮೇಶನಿಗೆ ಹಾಯಿಸಿ ತನ್ನ ಟ್ರಕ್ಕನ್ನು ಜೋರಾಗಿ ಓಡಿಸಿಕೊಂಡ ಹೋಗಿದ್ದ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ಕಾರ್ಯ ಪ್ರವರ್ತರಾಗಿ ಪಿಐ. ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿರುತ್ತಾರೆ.

ಅಲ್ಲಿ ಪ್ರತ್ಯಕ್ಷ ಧರಿಸಿ ಪೆಟ್ರೋಲ್ ಬಂಕ್ ಮಾಲೀಕ ನೀಡಿದ ಮಾಹಿತಿ ಹಾಗೂ ಅಪಘಾತ ಸ್ಥಳದಲ್ಲಿ ಬಿದ್ದ ಮುಂದಿನ ಭಾಗದ ಮುರಿದ ತುಕ್ಕಡಿಯಿಂದ ಮತ್ತು ಹಿರಿಬಾಗೆವಾಡಿಯ ಟೋಲ್ ನಲ್ಲಿಯ ಸಿಸಿಟಿವಿ ಕ್ಯಾಮೆರಾದಿಂದ ಮಾಹಿತಿ ಪಡೆದುಕೊಂಡು ಅಂಬಡಗಟ್ಟಿ ಕ್ರಾಸ್ ಬಳಿ ಹೊರಟಿದ್ದ ಜೆಎಚ್.05.DS.9944 ಅಶೋಕ್ ಲೇಲ್ಯಾಂಡ್ ಟ್ರಕ್ ಅನ್ನು ಕಿತ್ತೂರ್ ಠಾಣೆಯ ಎಚ್ ಸಿ ರವರ ಸಹಾಯದಿಂದ ತಡೆದು ಅಪಘಾತ ಪಡಿಸಿದ ಬಗ್ಗೆ ಮುರಿದ ಮುಂಭಾಗದಿಂದ ತಾಳೆ ಮಾಡಿ ಖಚಿತಪಡಿಸಿಕೊಂಡು ಆರೋಪಿತನಾದ ಹಮೀದ್ ಖಾನ್ ರುಕ್ಕುದಿನ್ (32) ತಾಲೂಕ್ ಪಾನವಲ ಹರಿಯಾಣ ರಾಜ್ಯ ಈತನನ್ನು ಹಾಗೂ ಅಪಘಾತ ಪಡಿಸಿದ ಟ್ರಕ್ ಸಮೇತ ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರಿಸಲಾಗಿದೆ..

ಈ ಕಾರ್ಯಾಚರಣೆಯ ಬಗ್ಗೆ ಉಪ ಪೊಲೀಸ್ ಮಹಾ ನಿರೀಕ್ಷಕರ ಗಮನಕ್ಕೆ ಬಂದಾಗ ಹಿರಿ ಬಾಗೇವಾಡಿಯ ಪಿ ಐ ಶ್ರೀ ಸುಂದರೇಶ್ ಹೊಳೆನ್ನವರ್ ಹಾಗೂ ಶ್ರೀ ಎಸ್.ಬಿ.ಬಾಬಣ್ಣವರ್ ಸಿಪಿಸಿ (1449) ನಗರ ಇವರಿಗೆ ಈ ನಿಮ್ಮ ಕರ್ತವ್ಯ ನಿಷ್ಠೆ ಹಾಗೂ ಉತ್ತಮ ಸೇವೆಯನ್ನು ಮೆಚ್ಚಿ ತುಂಬು ಹೃದಯದಿಂದ ಸ್ಲೇಗಿಸಿದ..

ಶ್ರೀ ಭೂರಸೆ ಬುಷನ್ ಗುಲಾಬ್ ರಾವ್. ಐಪಿಎಸ್. ಪೊಲೀಸ್ ಆಯುಕ್ತರು. ಬೆಳಗಾವಿ ನಗರ.

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments