ಮೂಡಲಗಿ: ಸಮಾಜದಲ್ಲಿ ವೈದ್ಯರಿಗೆ ತುಂಬಾ ಗೌರವದ ಸ್ಥಾನವಿದೆ ವೈದ್ಯೋ ನಾರಾಯಣೋ ಹರಿ ಎಂದು ನಮ್ಮ ವೇದ ಉಪನಿಷತ್ತುಗಳಲ್ಲಿ ಹೇಳಲಾಗಿದೆ. ವೈದ್ಯರನ್ನು ದೇವರೆಂದೇ ನೋಡುವ ಸಮಾಜಕ್ಕೆ ನಾವು ಜೀವ ಉಳಿಸುವ ಕಾರ್ಯ ಮಾಡುತ್ತೇವೆ ಎಂದು ವೈದ್ಯ ಡಾ. ಪ್ರಶಾಂತ್ ಕುರುಬೇಟ ಹೇಳಿದರು.
ಪಟ್ಟಣದ ಶ್ರೀ ಬಿ.ವಿ ಸೋಳ್ವಾಲ್ಕರ್ ಪಬ್ಲಿಕ್ ಶಾಲೆಯಲ್ಲಿ (ಸಿಬಿಎಸ್‌ಇ) ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ದೇವರು ಜನ್ಮ ನೀಡಿದರೆ ವೈದ್ಯರು ಆ ಜೀವವನ್ನ ಆರೋಗ್ಯವಾಗಿ ಮುನ್ನಡೆಸಲು ಸಹಾಯ ಸಹಕಾರ ನೀಡುತ್ತಾರೆ ಆದ್ದರಿಂದ ಅಂತ ವೈದ್ಯರಿಗೆ ದೇವರ ಸ್ಥಾನ ಕಲ್ಪಿಸಲಾಗಿದೆ ಎಂದು ಹೇಳಿದರು.
ಡಾ. ವಿಶಾಲ ಪಾಟೀಲ ಮಾತನಾಡಿ ವೈದ್ಯ ವೃತ್ತಿಯ ಮಹತ್ವ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ವಿದ್ಯಾರ್ಥಿಗಳು ಓದಬೇಕಾದ ರೀತಿಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಡಾ. ಪ್ರಶಾಂತ್ ಬಾಬಣ್ಣವರ ಮಾತನಾಡಿ ಶಾಲಾ ಮಕ್ಕಳ ಆರೋಗ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಲಯನ್ಸ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷೆ ಸುನಿತಾ ಹೊಸೂರ್ ಅಧ್ಯಕ್ಷತೆ ವಹಿಸಿದ್ದರು.
ಡಾ. ಮಹಾಂತೇಶ ಗಾಣಿಗೇರ, ಡಾ. ಸೌಮ್ಯ ಗಾಣಿಗೇರ ಡಾ. ಪದ್ಮಾ ಪಾಟೀಲ ಡಾ. ಮಹಾಂತೇಶ ನಾಗನೂರಿ, ಶಿವು ಹೊಸೂರ, ಪ್ರಾಚಾರ್ಯ ಜೋಸೆಫ ಎಸ್.ಬೈಲ್ ಉಪಸ್ಥಿತರಿದ್ದರು.
ಲಕ್ಷ್ಮೀ ಬ್ಯಲಾ ಸ್ವಾಗತಿಸಿದರು. ಮುರಗೇಶ ಹಿರೇಮಠ ನಿರೂಪಿಸಿದರು. ಆಯುಷ ಕರೋಶಿ ವಂದಿಸಿದರು.
ವರದಿ: ಸುನೀಲ್ ಗಸ್ತಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments