ರಾಯಭಾಗ: ಪ್ರತಿಷ್ಠಿತ ದೇವಸ್ಥಾನ ಶಾಂತಿ ಸಮಾನತೆ ಬಗ್ಗೆ ಭೋದನೆ ನೀಡಬೇಕಿದ್ದ ದೇವಸ್ಥಾನದ ಅರ್ಚಕರ ಗಲಾಟೆಯಿಂದ ಸುತ್ತ ಮುತ್ತಲಿನ ಭಕ್ತಾದಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಹೌದು,, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಕ್ಷೇತ್ರ ಯಲ್ಪಾರಟ್ಟಿ ಗ್ರಾಮದ ಶ್ರೀ ಅರಣ್ಯ ಸಿದ್ದೇಶ್ವರ ದೇವಸ್ಥಾನದ ಅರ್ಚಕರ ಜಮೀನು ವ್ಯಾಜ್ಯಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಮತ್ತೆ ಗಲಾಟೆ ಶುರುವಾಗಿದ್ದು. ಪೊಲೀಸ್ ರ ಮದ್ಯಸ್ತಿಕೆ ಮದ್ಯಯೆ ಪ್ರಚೋದನಕಾರಿ ಅಂಶ ಬೆಳಕಿಗೆ ಬಂದಿವೆ.
ಎರಡು ಕುಟುಂಬಗಳ ಗಲಾಟೆ ಹಿನ್ನೆಲೆ ಇಡೀ ರಾತ್ರಿ ಪೊಲೀಸ್ ಬಂದೋಬಸ್ತ್ ಇದ್ದರು ರಾತ್ರಿ ಪೊಲೀಸ್ ರ ಮುಂದೆಯೆ ವ್ಯಾಜ್ಯವಿರುವ ಸ್ಥಳಗಳಲ್ಲಿ ಅಂಗಡಿ ನಿರ್ಮಾಣದ ವಸ್ತುಗಳನ್ನ ರವಾನೆ ಮಾಡಿಲಾಗಿದೆ.
ವ್ಯಾಜ್ಯವಿರುವ ಗದ್ದೆಯಲ್ಲಿನ ಬೆಳೆ ನಾಶಮಾಡಿರುವ ಘಟನೆ ನಡೆದರು ಕೂಡ ಪೊಲೀಸರು ಕಂಡು ಕಾಣದಂತೆ ಇರುವುದು ಯಾಕೆ…? ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಕ್ರೋಶವಾಗಿದೆ.
ವರದಿ: ಓಂಕಾರ್ ಹಾರೂಗೇರಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments