Friday, September 19, 2025
spot_img

ಬದುಕಿದ್ದರೂ ಮರಣ ಪ್ರಮಾಣ ಪತ್ರ: ಕೋಲಾರ ನಗರಸಭೆ ಎಡವಟ್ಟು

ಕೋಲಾರ: ಕೋಲಾರ ನಗರಸಭೆ ಜನನ-ಮರಣ ವಿಭಾಗದ ಗಂಭೀರ ಎಡವಟ್ಟಿನಿಂದ ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಲಾಗಿದೆ.

ಕಠಾರಿಪಾಳ್ಯದ ರವಿಕುಮಾ‌ರ್ ಹೆಸರಿನಲ್ಲಿ 2025 ಜನವರಿ 26ರ ಮರಣ ದಾಖಲೆ ನಿರ್ಮಾಣವಾಗಿದೆ. ಸಹೋದರ ಪ್ರಕಾಶ್ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ತಂತ್ರಾಂಶದಲ್ಲಿ ‘The person is not alive’ ಎಂಬ ಸಂದೇಶ ಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ. ಪೌರಾಯುಕ್ತ ತನಿಖೆ ಮಾಡಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments