Friday, September 19, 2025
spot_img

ಭಗೀರಥ ಜಯಂತಿಯನ್ನು ಜಿಲ್ಲಾಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲು ಉಪ್ಪಾರ್ ಸಮಾಜದಿಂದ ಪೂರ್ವಭಾವಿ ಸಭೆ

ಬೆಳಗಾವಿ ಜಿಲ್ಲಾ ಉಪ್ಪಾರ್ ಸಂಘದ ಅಧ್ಯಕ್ಷ ಶ್ರೀ ಜಿ.ಎಸ್ ಉಪ್ಪಾರ್ ಅವರ ನೇತೃತ್ವದಲ್ಲಿ ಭಗೀರಥ ಜಯಂತಿ ಜಿಲ್ಲಾಮಟ್ಟದಲ್ಲಿ ಅತಿ ವಿಜೃoಭಣೆಯಿಂದ ಆಚರಿಸಲು ಉಪ್ಪಾರ್ ಸಮಾಜ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಸಮುದಾಯದ ಎಲ್ಲಾ ಬಾಂಧವರಿಗೆ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸಿ ಸಮಾಜದ ಶಕ್ತಿ ಪ್ರದರ್ಶಿಸಲು ಕರೆ ನೀಡಲಾಯಿತು.

ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಲವಾರು ತಾಲೂಕುಗಳಿಂದ ಸಮಾಜದ ಮುಖಂಡರು ಸೇರಿದಂತೆ ಹಿರಿಯರಾದ ಶ್ರೀ ಶಿವಪುತ್ರಪ್ಪ ಜಕವಾಳ ಮತ್ತು ಯಲ್ಲಪ್ಪ ಹೆಜ್ಜೆಗಾರ್ ಅವರು ಕಾರ್ಯಕ್ರಮ ಹೇಗೆ ಮಾಡಬೇಕೆಂದು ಸಲಹೆ ನೀಡಿದರು. ಇನ್ನು ಅನೇಕರು ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಿ ತಮ್ಮ ಕಾಣಿಕೆಯನ್ನು ಸಹ ಸಲ್ಲಿಸಿದರು.

ದಿನಾಂಕ 11.5.2025 ರಂದು ಜಿಲ್ಲಾಡಳಿತ ಹಾಗೂ ಉಪಹಾರ ಸಮಾಜದ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಭಗಿರಥ ಜಯಂತಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಹಿಳೆಯರ ಕುಂಭಮೇಳದೊಂದಿಗೆ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುಮಾರ್ ಗಂಧರ್ವ ಸಭಾಭವನ ತಲುಪುವುದು

ಭಗೀರಥ ಜಯಂತಿ ನಿಮಿತ್ಯ ಉಪ್ಪಾರ್ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಶೇ 80 ಮತ್ತು ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ಅಂಕಪಟ್ಟಿ ಜೆರಾಕ್ಸ್ ಪ್ರತಿಯೊಂದುಗೆ ಬಂದು ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳದಲ್ಲಿ ಭಾಗವಹಿಸಬೇಕು ಎಂದು ಸಭೆಯಲ್ಲಿ ಕರೆ ನೀಡಿದರು.

ಇದನ್ನು ಓದಿ… ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಚಿವೆ ಹೆಬ್ಬಾಳಕರ್

ಕುಂಭದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬೆಳಗಾವಿ ಜಿಲ್ಲಾ ಭಗಿರಥ ಜಯಂತಿ ಸಮಿತಿ ವತಿಯಿಂದ ಒಂದು ಸೀರೆ ಒಂದು ಕುಂಭ ಕಾಯಿ ಹೂವು ನೀಡಲಾಗುವುದು ‌ಉಪ್ಪಾರ್ ಸಮಾಜದ ಬೆಳಗಾವಿ ಜಿಲ್ಲೆಯ ಮುಖಂಡರಾದ ಶಿವಪುತ್ರ ಜಕಬಾಳ. ಉದಯ್ ಡಗಲ್. ಯಲ್ಲಪ್ಪ ಹೆಜ್ಜಗಾರ್. ಬಸವರಾಜ್ ಕಾನಪ್ಪನವರ್. ಅಡಿವೆಪ್ಪ ಬೆಳಕುಂದಿ. ಕುಶಾಲ್ ಗುಡ್ಡೆ ನವರು. ಸೋಮು ತೊಳಿ. ವಿಷ್ಣು ಲಾತೂರ್. ಬಸವರಾಜ್ ತುಳಸಿಗೇರಿ. ಸಿದ್ದಪ್ಪ ಅಮ್ಮನವರ. ರಾಜು ದಳವಾಯಿ. ಉದಯ್ ಹೊನ್ನಕುಪ್ಪಿ. ಲಕ್ಷ್ಮಿ ಕೋಟೂರ್. ವಿನಾಯಕ್ ಮೊದಲಬಾವಿ. ಶ್ರೀಶೈಲ್ ಅಗ್ನೇಪ್ಪಗೋಳ. ಇತರರು ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.

 

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments