ಅಮಾಯಕ ಹೆಣ್ಮಕ್ಕಳ ಕುಂಕುಮ ಅಳಿಸಿದ ಪ್ರತೀಕಾರವೇ ಈ ‘ಆಪರೇಷನ್ ಸಿಂಧೂರ’!
ನವದೆಹಲಿ:- ಕಳೆದ ಏಪ್ರಿಲ್ 22. ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಸುಮಾರು 28 ಭಾರತೀಯರು ಅಸುನೀಗಿದರು. ಈ ಕರಾಳ ದಿನ ಎಂದೂ ಮರೆಯುವಂತದಲ್ಲ. ಹಿಂದೂಗಳ ಮೇಲೆ ಉಗ್ರರು ತೋರಿದ ಕ್ರೌರ್ಯ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುವಂತೆ ಮಾಡಿದೆ.
ಈ ದಾಳಿ ಅನೇಕರ ಕುಂಕುಮವನ್ನು ಅಳಿಸಿತ್ತು. ಮಹಿಳೆಯರ ಕಣ್ಣೀರಿಗೆ ಸಾಕ್ಷಿ ಆಗಿತ್ತು. ಪ್ರತಿ ಕಣ್ಣೀರಿಗೂ ಲೆಕ್ಕ ನೀಡಲಾಗುವುದು ಎಂದು ಭಾರತ ಪ್ರತಿಜ್ಞೆ ಮಾಡಿತ್ತು. ಗುರುಗ್ರಾಮದ ಹಿಮಾಂಶಿ ನರ್ವಾಲ್ ಏಪ್ರಿಲ್ 16ರಂದು ವಿವಾಹ ಆಗಿದ್ದ ತಮ್ಮ ಪತಿ ಲೆಫ್ಟಿನೆಂಟ್ ವಿನಯ್ ಜೊತೆ ಹನಿಮೂನ್ ಗೆ ಬಂದಿದ್ದರು.
ಈ ವೇಳೆ ವಿನಯ್ ಅವರನ್ನು ಭೀಕರವಾಗಿ ಉಗ್ರರು ಕೊಂದು ಹಾಕಿದ್ದರು. ಜೈಪುರದ ಪ್ರಿಯಾಂಕಾ ಶರ್ಮಾ ಕೂಡ ಪತಿ ರೋಹಿತ್ ಜೊತೆ ಹನಿಮೂನ್ ಗೆ ಬಂದು ಕುಂಕುಮ ಕಳೆದುಕೊಂಡಿದ್ದರು.
ಶಿಮ್ಲಾ ನಿವಾಸಿ ಅಂಜಲಿ ಠಾಕೂರ್ ಅವರು ತಮ್ಮ ಪತಿ ವಿವೇಕ್ ಠಾಕೂರ್ ಜೊತೆ ಪ್ರವಾಸಕ್ಕೆಂದು ತೆರಳಿದ್ದರು, ಅವರು ಸಹ ಇದೇ ವರ್ಷದ ಏಪ್ರಿಲ್ 12 ರಂದು ವಿವಾಹವಾಗಿದರು.
ಉಗ್ರರ ದಾಳಿಗೆ ಪತಿಯನ್ನು ಕಳೆದುಕೊಂಡಿದ್ದರು. ಕರ್ನಾಟಕದ ಮಂಜುನಾಥ ರಾವ್ ಮತ್ತು ಭರತ್ ಭೂಷಣ್ ಅವರು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು.
ಮದ್ವೆಯಾಗಿ ವಾರವಾಗುವ ಮುನ್ನವೇ ಹಣೆಯ ಸಿಂಧೂರವನ್ನು ಪಾಪಿಗಳು ಅಳಿಸಿದ್ದರು. ಕಣ್ಣೆದುರೇ ಪತಿಯನ್ನು ಹತ್ಯೆಗೈದು ರಾಕ್ಷಸೀಯ ಕೃತ್ಯ ಎಸಗಿದ್ದರು. ಇದಕ್ಕೆ ‘ಅಪರೇಷನ್ ಸಿಂಧೂರʼ ಎನ್ನುವ ಹೆಸರಿನಡಿಯಲ್ಲಿ ಭಾರತ ಪ್ರತೀಕಾರವನ್ನು ತೀರಿಸಿದೆ.
ಮುಳ್ಳನ್ನು ಮುಳ್ಳಿನಿಂದಲೆ ತಗೆಯಬೇಕು ಎನ್ನುವ ಸೂತ್ರದಡಿ ಆಪರೇಷನ್ ಸಿಂಧೂರಕ್ಕೆ ಭಾರತ ಚಾಲನೆ ನೀಡಿತ್ತು. ಇದರಂತೆ ಭಾರತ ʼಆಪರೇಷನ್ ಸಿಂಧೂರʼ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದೆ.
Recent Comments