ಗೋಕಾಕ: ಇಂದು ಗೋಕಾಕ ನಗರಕ್ಕೆ ಆಗಮಿಸಿದ್ದ ಮಾಜಿ ಸಚಿವ ದಿ. ವಿ ಎಲ್ ಪಾಟೀಲ (ಬ್ಯಾಕೂಡ ಹುಲಿ) ಅವರ ಸುಪುತ್ರ ಶ್ರೀ ಪ್ರತಾಪ್ ರಾವ್ ಪಾಟೀಲ ಹಾಗೂ ಅವರ ಪುತ್ರ ಶಿವರಾಜ್ ಪಾಟೀಲ್ ಅವರನ್ನು ಡಾ ಮಹಾಂತೇಶ ಕಡಾಡಿಯವರು ಸ್ವಾಗತಿಸಿದರು.
ಅನೇಕ ದಿನಗಳಿಂದ ಗೋಕಾಕ ನಗರಕ್ಕೆ ಬರಲು ಉತ್ಸುಕರಾಗಿದ್ದ ಪ್ರತಾಪ್ ರಾವ್ ಪಾಟೀಲ ಅವರು ಕೆಲಸದ ಒತ್ತಡದಿಂದಾಗಿ ಬಂದಿರಲಿಲ್ಲ. ಹೀಗಾಗಿ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಗೋಕಾಕ ನಗರಕ್ಕೆ ಆಗಮಿಸಿ ಶ್ರೀ ಮಹಾಲಕ್ಷ್ಮಿ ದೇವಿ ಆಶಿರ್ವಾದ ಪಡೆದು ಪುನೀತರಾದರು.
ಇದೊಂದು ಸೌಹಾರ್ದಯುತ ಭೇಟಿ ಆಗಿದ್ದುರೂ ಕೂಡ ಇದರಲ್ಲಿ ಅನೇಕ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.
ವರದಿ: ಸಿದ್ದು ಅರಭಾಂವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments