ಕಂಕಣವಾಡಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ್ ಕಂಕಣವಾಡಿ ಪಟ್ಟಣದಲ್ಲಿ ಇದೆ 12 ಸೆಪ್ಟಂಬರ್ ದಿಂದ 16 ಸೆಪ್ಟಂಬರ್ 2025 ರ ವರಿಗೆ ನಡೆಯಲಿರುವ ಶ್ರೀ ಗಂಗಾಭಾಂವಿ ಕರೆಮ್ಮಾದೇವಿ ಜಾತ್ರೆ ನಡೆಯುತ್ತದೆ.
ಜಾತ್ರೆಯ ಆರಂಭದಲ್ಲಿ 12 ಮತ್ತು 13 ನೇ ತಾರಿಕು ರಾಜ್ಯಮಟ್ಟದ ಪುರುಷರ ಕಬ್ಬಡ್ಡಿಗಳನ್ನು ಆಕರ್ಷಕ ಬಹುಮಾನಗಳಿಂದ ನಡೆಸುತ್ತಿದ್ದು,
ಪ್ರಥಮ ಬಹುಮಾನ: 50001 ರೂ, ದ್ವಿತೀಯ ಬಹುಮಾನ: 30001 ರೂ, ತೃತೀಯ ಬಹುಮಾನ: 20001 ರೂ, ಚತುರ್ಥ ಬಹುಮಾನ: 10001 ರೂ, ಶರತುಗಳು ನೆರವೇರುವುದು.
ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಕರಾಗಿ: ಪ್ರತಾಪ ಅಣ್ಣಾ ಪಾಟೀಲ್, ಪ್ರಣಯ ಅಣ್ಣಾ ಪಾಟೀಲ್, ವಿವೇಕ ಅಣ್ಣಾ ಪಾಟೀಲ್, ಶಿವರಾಜ್ ಅಣ್ಣಾ ಪಾಟೀಲ್, ಆಗಮಿಸುತ್ತಿದ್ದು ಹಾಗು ಅಣ್ಣಾಸಾಹೇಬ ದೇಸಾಯಿ, ಶಂಕರಾವ್ ದೇಸಾಯಿ, ಪ್ರಕಾಶ್ ಹುಕ್ಕೇರಿ, ಇವರ ಅಧ್ಯಕ್ಷತೆಯಲ್ಲಿ ನೆರವೇರುವುದು.
14 ಸೆಪ್ಟಂಬರ್ 2025 ರಂದು ಆಕರ್ಷಕ ಬಹುಮಾನದೊಂದಿಗೆ ಜೋಡೆತ್ತಿನ ಗಾಡಿ ಶತು೯, ಕುದುರೆ ನವತರು ಜನರಲ್ ಇತ್ಯಾದಿ ಶರತ್ತುಗಳು ರವಿವಾರ ಜರುಗಲಿದ್ದು , ಪ್ರಥಮ ಬಹುಮಾನ ಎಸ್ಪಿ ಶೈನ್ ಬೈಕ್ (SP shine bike), ದ್ವಿತೀಯ ಬಹುಮಾನ (ಶೈನ್ ಬೈಕ್) Shine bike, ತೃತೀಯ ಬಹುಮಾನ ಎಚ್ಎಫ್ 100 (HF 100 bike), ಚತುರ್ಥ ಬಹುಮಾನ Electric Bike ವಿತರಿಸುತ್ತಿದ್ದು
15 ಸೆಪ್ಟಂಬರ್ ರಂದು ಟಗರಿನ ಕಾಳಗ ಬಂಡಾರದ ಉತ್ಸವ , ಆರ್ಕೆಸ್ಟ್ರಾ ಇತ್ಯಾದಿ ಕಾರ್ಯಕ್ರಮಗಳು ಜರಗುತ್ತವೆ,
16 ಸೆಪ್ಟಂಬರ್ 2025 ರಂದು ದೇವಿಯ ಉಡಿ ತುಂಬಿ ನೈವೇದ್ಯ ಅರ್ಪಿಸಿ ಜಾತ್ರಾ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು ಎಂದು ಜಾತ್ರಾ ಕಮಿಟಿ ಹಿರಿಯರಾದ ಚಂದು ನಾಗರಮುನ್ನೋಳಿ, ಹಾಲಪ್ಪಣ್ಣಾ ಸುಳ್ಳನವರ, ಹಾಲಪ್ಪ ಹುಕ್ಕೇರಿ, ಹೇಮಂತ್ ದೇಸಾಯಿ, ಬಸಪ್ಪ ಗದಾಡಿ, ಜಾತ್ರಾ ಕಮಿಟಿಯವರು ನಮ್ಮ ಕ್ರಾಂತಿ ಕರ್ನಾಟಕ ನ್ಯೂಸ್ ಮುಖಾಂತರ ಸುತ್ತಮುತ್ತ ಹಳ್ಳಿಯ ಸಾರ್ವಜನಿಕರಿಗೆ ತಿಳಿಸಿದರು.
ವರದಿ: ಸಿದ್ದು ಅರಭಾಂವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments