ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ವಿದ್ಯಾರ್ಥಿ **ಶೌರ್ಯ ಶಂಕರ ಪಾಟೀಲ್**, ಹಾರೂಗೇರಿ ಖಾಸಗಿ ಶಾಲೆಯ **ಶ್ರೀ ಭಗವಾನ್ ಇಂಗ್ಲೀಷ್ ಮೀಡಿಯಂ ಸ್ಕೂಲ್**ನ ವಿದ್ಯಾರ್ಥಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾನೆ. ಶೌರ್ಯ 625 ಅಂಕಗಳಿಗೆ 616 ಅಂಕಗಳನ್ನು (98.54%) ಪಡೆದು ಶ್ರೇಷ್ಟತೆಯನ್ನು ಸಾಧಿಸಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಯಿಂದ ಅವರ ಮನೆ ಹಾಗೂ ಶಾಲೆಯಲ್ಲಿ ಸಂತಸ ಮನೆಮಾಡಿದ್ದು, ಈ ಅಪೂರ್ವ ಯಶಸ್ಸಿಗೆ **ಹಿಡಕಲ್ ಪಾಟೀಲ್ ಬಂಧುಗಳು, ಜ್ಯೋತಿಗೊಂಡ ಹಾಗೂ ಸನದಿ ಬಂಧುಗಳು** ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಶೌರ್ಯ ಶಂಕರ ಪಾಟೀಲ್ ಅವರಿಗೆ ಭವಿಷ್ಯದಲ್ಲಿಯೂ ಇಂತಹವೇ ಸಾಧನೆಗಳನ್ನು ಮಾಡಬೇಕೆಂಬ ಹಾರೈಕೆಗಳು.
Recent Comments