ರಾಯಬಾಗ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ವೃದ್ಧನ ಮೇಲೆ ವ್ಯಾಪರ ಹೆಚ್ಚು ಕಡಿಮೆ ವಿಷಯವಾಗಿ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳಿಗೆ ಜಾಮೀನು ತಿರಸ್ಕಾರ.! ಬೆಳಗಾವಿ ಇಲ್ಲಿನ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಿರಾಣಿ ಅಂಗಡಿ ವ್ಯಾಪಾರಸ್ತನ ಮೆಲೆ ಮಾರನಾಂತಿಕ ಹಲ್ಲೆ ಮಾಡಿದ್ದ, ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.
ನಿಪನಾಳ (ರಾಯಬಾಗ ತಾಲೂಕು) ಜುಲೈ ೧೨ ರಂದು ಕಿರಾಣಿ ಅಂಗಡಿ ಸಂಬಂಧಿತ ವ್ಯಾಪಾರದ ಸಂಬಂಧಿತ, ಹೊಟ್ಟೆ ಕಿಚ್ಚಿನಿಂದ, ವಯೋವೃದ್ಧ ಹನುಮಂತ ತಳವಾರ ಇವನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು.
ಈ ಸಂಬಂಧಿತ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕ್ರಸಂ ೧೯೦/೨೦೨೫ ರಂತೆ ಈ ಕೆಳಗಿನ ಕಲಂಗಳು ಅನ್ವಯಗೊಂಡಿವೆ. (BNS) ೨0೨೩ 352,35 (3) 115(2) 109(1), 3(5)
ಜಾತಿ ಪಂಗಡ ಎಸ್ಸಿ ಎಸ್ಟಿ ಕಾಯ್ದೆ,1989 ಹಾಗೂ ತಿದ್ದುಪಡೆ ಕಾಯ್ದೆ,2015 ಅಧೀನದಲ್ಲಿ, 3(1), 3(1)(2), 3(2)2,2/2 ಹಲ್ಲೆ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾ ಗಳಲ್ಲಿ ಸೆರಿಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ವಯೋವೃದ್ಧನ ಮೇಲೆ ಹಲ್ಲೆ, ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ನಿನ್ನೆ ದಿ: 22/09/25 ರಂದು ಕಾಯ್ದಿರಿಸಲಾಗಿತ್ತು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ವೃದ್ಧ ಹಣಮಂತ ದುಂಡಪ್ಪ ತಳವಾರ ಪರ ವಿಶೇಷ ನ್ಯಾಯ ಮಂಡಿಸಿದ, ವಕೀಲೆ ಪ್ರತಿಮಾ ಜೋಶಿ, ಸಾರ್ವಜನಿಕ ಅಭಿಯೋಜಕರಾದ ರವೀಂದ್ರ ದೇವರೆಡ್ಡಿ ವಾದ ಮಂಡಿಸಿದರು.
ಜಾಮೀನು ಅರ್ಜಿ ವಜಾ ಹಿನ್ನೆಲೆಯಲ್ಲಿ ಸಂತ್ರಸ್ತನ ಕುಟುಂಬಸ್ಥರು, ಹಾಗು ಸಾರ್ವಜನಿಕರು, ನ್ಯಾಯಾಲಯದ ತೀರ್ಪಿಗೆ, ಹಾಗು ಬಲವಾಗಿ ವಾದ ಮಂಡಿಸಿದ ವಕೀಲೆ ಪ್ರತಿಮಾ ಜೋಶಿ ಅವರ ಕಾರ್ಯವೈಕರಿಗೆ, ಧನ್ಯವಾದ ತಿಳಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳು ಪರಾರಿಯಾಗಿ, 3 ತಿಂಗಳ ಕಳೆಯುತ್ತಾ ಬಂತು, ಆದ್ರೆ ಆರೋಪಿಗಳು ಇನ್ನೂ ಬಂಧನವಾಗಿಲ್ಲ. ಪೊಲೀಸರು ಕೂಡಲೆ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುತ್ತಾರಾ? ಕಾಯ್ದು ನೋಡಬೇಕಿದೆ.



                                    
Recent Comments