ಹುಕ್ಕೇರಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎದುರು ಪತಿ ಮೇಲೆ ಪತ್ನಿಯೊಬ್ಬಳು ಹಲ್ಲೆ ನಡೆಸಿರುವ ಘಟನೆ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಾಥಮಿಕ ಕೃಷಿ ಪತ್ತಿನ ಸಂಘ ಹಾಗೂ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಪ್ರಚಾರಕ್ಕೆಂದು ಮದಿಹಳ್ಳಿ ಗ್ರಾಮಕ್ಕೆ ತೆರಳಿದ್ದರು.
ಆ ವೇಳೆ ಮದಿಹಳ್ಳಿ ಪಿಕಿಪಿಎಸ್ ಸದಸ್ಯ ಮಾರುತಿ ಸನದಿ ಎಂಬುವರು ಸಚಿವರ ಸ್ವಾಗತಕ್ಕೆಂದು ಪಿಕೆಪಿಎಸ್ ಕಚೇರಿ ಬಳಿ ನಿಂತಿದ್ದರು. ಇದನ್ನು ಗಮನಿಸಿದ ಮಾರುತಿಯ ಪತ್ನಿ ಸಚಿವರ ಎದುರೇ ಏಕಾಎಕಿ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ.
ಸ್ಳಳದಲ್ಲಿದ್ದ ಪೊಲೀಸರು ಪತಿ ಪತ್ನಿ ಜಗಳ ಬಿಡಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣಯಿತು. ಕಾರಣ ಇಷ್ಟೆ ಪತಿ ಮೇಲೆ ಹಲ್ಲೆ ಮಾಡಿದ ಪತ್ನಿ ರಮೇಶ ಕತ್ತಿ ಬೆಂಬಲಿತ ಮಹಿಳೆಯಾಗಿದ್ದು, ಪತಿ ಮಾರುತಿ ಅವರು ಜಾರಕಿಹೊಳಿ ಅವರಿಗೆ ಬೆಂಬಲ ನೀಡಿದ್ದಕ್ಕೆ ಈ ಹಲ್ಲೆ ಪ್ರಕರಣ ನಡೆದಿದೆ ಎನ್ನಲಾಗಿದೆ.
Recent Comments