HomeUncategorizedNewsಟೆಕ್ಕಿ ಸೀತಾರಾಮ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪತಿ ಸತ್ತ ತಿಂಗಳಲ್ಲೇ ಪ್ರಿಯಕರನ ಜೊತೆ ಪತ್ನಿ...

ಟೆಕ್ಕಿ ಸೀತಾರಾಮ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪತಿ ಸತ್ತ ತಿಂಗಳಲ್ಲೇ ಪ್ರಿಯಕರನ ಜೊತೆ ಪತ್ನಿ ಮದುವೆ! ಹೈದರಾಬಾದ್: ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಮ್ ಆತ್ಮಹತ್ಯೆ

ಪ್ರಕರಣ ಈಗ ಮತ್ತೊಂದು ಆಘಾತಕಾರಿ ತಿರುವು ಪಡೆದುಕೊಂಡಿದೆ. ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು 19 ಪುಟಗಳ ಡೆತ್‌ನೋಟ್ ಬರೆದಿಟ್ಟು ಸೀತಾರಾಮ್ ಪ್ರಾಣ ಕಳೆದುಕೊಂಡ ಕೇವಲ ಒಂದು ತಿಂಗಳಲ್ಲೇ, ಆತನ ಪತ್ನಿ ತನ್ನ ಪ್ರಿಯಕರನ ಜೊತೆ ವಿವಾಹವಾಗಿದ್ದಾಳೆ!

ನಡೆದಿದ್ದೇನು?
ಕಳೆದ ಫೆಬ್ರವರಿಯಲ್ಲಿ ಪತ್ನಿಯ ಅಕ್ರಮ ಸಂಬಂಧಗಳಿಂದ ಬೇಸತ್ತು ಸೀತಾರಾಮ್ ಹುಸೇನ್ ಸಾಗರ್ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಅವರು ಬರೆದಿದ್ದ ಸುದೀರ್ಘ ಪತ್ರದಲ್ಲಿ, ತನ್ನ ಪತ್ನಿ ರೇಣುಕಾ ಹತ್ತಾರು ಜನರೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ತನ್ನ ಖಾಸಗಿ ವಿಡಿಯೋಗಳನ್ನು ಪ್ರಿಯಕರನಿಗೆ ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದರು.

ತಿಂಗಳಲ್ಲೇ ಮದುವೆ, ಪೊಲೀಸರಿಂದ ಬಂಧನ:
ಪತಿ ಸತ್ತ ದುಃಖ ಕಿಂಚಿತ್ತೂ ಇಲ್ಲದಂತೆ ರೇಣುಕಾ, ಸೀತಾರಾಮ್ ಮೃತಪಟ್ಟು ತಿಂಗಳು ಕಳೆಯುವ ಮೊದಲೇ ತನ್ನ ಪ್ರಿಯಕರ ರಮಣಾರೆಡ್ಡಿಯ ಜೊತೆ ಮದುವೆಯಾಗಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸೀತಾರಾಮ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಬಾಚುಪಲ್ಲಿ ಪೊಲೀಸರು ರೇಣುಕಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದಾರೆ.

ಸೀತಾರಾಮ್ ಪೋಷಕರ ಆಕ್ರೋಶ:
“ನಮ್ಮ ಮಗನ ಸಾವಿಗೆ ಈಕೆಯೇ ನೇರ ಕಾರಣ. ಆತ ಸತ್ತ ಮೇಲೆ ಕನಿಷ್ಠ ಶೋಕವನ್ನೂ ಮಾಡದೆ ಪ್ರಿಯಕರನ ಜೊತೆ ಸಂಭ್ರಮದಿಂದ ಮದುವೆಯಾಗಿದ್ದಾಳೆ ಎಂದರೆ ಇವಳ ಕ್ರೌರ್ಯ ಎಷ್ಟಿರಬಹುದು?” ಎಂದು ಸೀತಾರಾಮ್ ಪೋಷಕರು ಕಣ್ಣೀರಿಟ್ಟಿದ್ದಾರೆ.

ಪ್ರಸ್ತುತ ಪೊಲೀಸರು ಈ ಇಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments