HomeUncategorizedNewsಸಿನಿಮಾ ಸ್ಟೈಲ್ ಹೈಡ್ರಾಮಾ: ಲವರ್ ಜೊತೆ ಓಡಿಹೋದ ಪತ್ನಿಗಾಗಿ ಬೂತ್ ಮುಂದೆ 5 ಗಂಟೆ ಕಾದ...

ಸಿನಿಮಾ ಸ್ಟೈಲ್ ಹೈಡ್ರಾಮಾ: ಲವರ್ ಜೊತೆ ಓಡಿಹೋದ ಪತ್ನಿಗಾಗಿ ಬೂತ್ ಮುಂದೆ 5 ಗಂಟೆ ಕಾದ ಗಂಡ! ಮುಂದೆ ಆಗಿದ್ದೇ ಬೇರೆ!

ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿಗಿಂತ ಈ ‘ಗಂಡ-ಹೆಂಡತಿ’ ಜಗಳವೇ ಈಗ ಹಾಟ್ ಟಾಪಿಕ್! ಎರಡು ವರ್ಷಗಳ ಹಿಂದೆ ಪ್ರೇಮಿಯೊಂದಿಗೆ ಓಡಿಹೋಗಿದ್ದ ಪತ್ನಿಯನ್ನು ಹಿಡಿಯಲು ಪತಿ ಮಾಡಿದ ಪ್ಲಾನ್ ಕೇಳಿದ್ರೆ ನೀವು ದಂಗಾಗ್ತೀರಾ.

ಬಿಸಿಲಲ್ಲೂ 5 ಗಂಟೆಗಳ ಕಾಯುವಿಕೆ!
ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿದೇವಾದ ತಾರಾಬರಿ ಬೂತ್ ಮುಂದೆ ವ್ಯಕ್ತಿಯೊಬ್ಬ ಬೆಳಗ್ಗೆಯಿಂದ ಸುಡು ಬಿಸಿಲಲ್ಲೂ ಕಾಯುತ್ತಿದ್ದ. ಮತದಾನ ಮಾಡಲು ಬರುವ ಪ್ರತಿಯೊಬ್ಬರನ್ನೂ ಹದ್ದಿನ ಕಣ್ಣಿನಿಂದ ನೋಡುತ್ತಿದ್ದ ಈತನನ್ನು ಕಂಡು ಭದ್ರತಾ ಪಡೆಗಳಿಗೂ ಅನುಮಾನ ಬಂದಿತ್ತು. ಆದರೆ ಆತ ಕಾಯುತ್ತಿದ್ದುದು ತನ್ನ ಪತ್ನಿಗಾಗಿ!

ಚಿರತೆಯಂತೆ ಎರಗಿದ ಪತಿ!
ಮಧ್ಯಾಹ್ನ 2 ಗಂಟೆ ಸುಮಾರಿಗೆ ಆ ಮಹಿಳೆ ವೋಟ್ ಹಾಕಲು ಬರುತ್ತಿದ್ದಂತೆಯೇ, ಅಲ್ಲಿಯವರೆಗೆ ಸುಮ್ಮನಿದ್ದ ಗಂಡ ಒಮ್ಮೆಲೇ ಚಿರತೆಯಂತೆ ಆಕೆಯ ಮೇಲೆ ಎರಗಿದ್ದಾನೆ. ಕೂದಲನ್ನು ಎಳೆದು ನೆಲಕ್ಕೆ ಬೀಳಿಸಿ ಹಲ್ಲೆ ಮಾಡಲು ಶುರುಮಾಡಿದಾಗ ಮತಗಟ್ಟೆಯಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಕೇಂದ್ರ ಭದ್ರತಾ ಪಡೆ (CAPF) ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದೆ.

ಗಂಡನ ‘ವಿಷಕಾರಿ’ ಲೆಕ್ಕಾಚಾರ ವರ್ಕ್ ಔಟ್ ಆಯ್ತು!
ಪತ್ನಿ ಓಡಿಹೋದರೂ ಮತಗಟ್ಟೆಗೆ ಬಂದೇ ಬರುತ್ತಾಳೆ ಎಂದು ಈತನಿಗೆ ಅಷ್ಟೊಂದು ಕಾನ್ಫಿಡೆನ್ಸ್ ಏಕಿತ್ತು ಗೊತ್ತಾ?
ವೋಟರ್ ಐಡಿ ಸಕ್ರಿಯವಾಗಿರಬೇಕೆಂದರೆ ಅಥವಾ ಸರ್ಕಾರಿ ಸವಲತ್ತು ಸಿಗಬೇಕೆಂದರೆ ಆಕೆ ತನ್ನ ಹಳೆಯ ಮತಗಟ್ಟೆಗೇ ಬರಬೇಕು ಎಂಬುದು ಈತನ ಲೆಕ್ಕಾಚಾರವಾಗಿತ್ತು.
ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳೇ ಈಕೆಯನ್ನು ಬಲೆಗೆ ಬೀಳಿಸಿವೆ!

“ನನ್ನ ಹೆಸರು ಡಿಲೀಟ್ ಮಾಡಿ” – ವಿಚಿತ್ರ ಬೇಡಿಕೆ!
ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ಯುವಾಗ ಆತ ಇಟ್ಟ ಬೇಡಿಕೆ ಮಾತ್ರ ವಿಚಿತ್ರವಾಗಿತ್ತು.

“ಅವಳು ಓಡಿಹೋಗಿ 2 ವರ್ಷ ಆಯ್ತು, ಅವಳ ವೋಟರ್ ಐಡಿಯಲ್ಲಿ ನನ್ನ ಹೆಸರು ಇರಬಾರದು. ಕೂಡಲೇ ನನ್ನ ಹೆಸರು ತೆಗೆಯುವವರೆಗೂ ಆಕೆಗೆ ವೋಟ್ ಹಾಕಲು ಬಿಡಬೇಡಿ” ಎಂದು ಕಿರುಚಾಡಿದ್ದಾನೆ.

ಕೊನೆಗೆ ಭದ್ರತಾ ಸಿಬ್ಬಂದಿ ಆಕೆಗೆ ಮತ ಚಲಾಯಿಸಲು ಅವಕಾಶ ನೀಡಿ, ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

ಓಡಿಹೋದವಳು ವೋಟ್ ಹಾಕಲು ಬಂದು ಸಿಕ್ಕಿಬಿದ್ದ ಈ ಘಟನೆ ಈಗ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ!

 

RELATED ARTICLES
- Advertisment -spot_img

Most Popular

Recent Comments