HomeUncategorizedNewsಬಡತನದ ಬೆಗೆ, ಶಿಕ್ಷಣ ಮುಟುಕು, ಶಿಲ್ಪ ಕಲೆಯಲ್ಲಿ ರಾಜ್ಯಮಟ್ಟದ ಸಾಧನೆ

ಬಡತನದ ಬೆಗೆ, ಶಿಕ್ಷಣ ಮುಟುಕು, ಶಿಲ್ಪ ಕಲೆಯಲ್ಲಿ ರಾಜ್ಯಮಟ್ಟದ ಸಾಧನೆ

ಕರ್ನಾಟಕ & ಮಹಾರಾಷ್ಟ್ರ ಸೇರಿ 60 ಕ್ಕೂ ಹೆಚ್ಚು ಮೇಲ್ಪಟ್ಟ ದೇವಸ್ಥಾನ, ಮಹಾದ್ವಾರ, ಮಾನಸ್ತಂಭ, ಜೈನಮಂದಿರ ಮೂರ್ತಿ ಕೆತ್ತನೆ

ಘಟಪ್ರಭಾ : ನಮ್ಮ ಬೋವಿ ಸಮಾಜ ಬಹಳ ಹಿಂದುಳಿದ ಸಮಾಜ, ಸಾವಿರಲ್ಲಿ ಒಬ್ಬರು ಕಾಡಪ್ಪ ಪರಶುರಾಮ್ ಗಾಡೀವಡ್ಡರ ಹಾಗೆ ಸಾಧನೆ ಮಾಡುತ್ತಾರೆ.

ಕಾಡಪ್ಪ ಅವರು ಶಿಲ್ಪ ಕಲೆಯಲ್ಲಿ ಸಾಧನೆ ಮಾಡಿ, ಒಬ್ಬ ಮಹಾನ್ ಶಿಲ್ಪಿಯಾಗಿ ಹೊರಹೋಮ್ಮಿದ್ದು ನಮ್ಮೆಲ್ಲರಿಗೂ ಹಾಗೂ ನಮ್ಮ ಬೋವಿ ಸಮಾಜಕ್ಕೂ ಒಂದು ಹೆಮ್ಮೆಯ ಸಂಗತಿಯಾಗಿದೆ. ಬಡತನವಿದ್ದರೂ, ಬಡತನಕ್ಕೆ ಹೆದರದೆ ತಮ್ಮ ಜ್ಯಾನದಿಂದ ಹಲವಾರು ಗುಡಿ ಗುಂಡರಗಳನ್ನು ನಿರ್ಮಾಣ ಮಾಡಿ, ರಾಜ್ಯಮಟ್ಟದ ಸಾಧನೆ ಮಾಡಿರುವುದು ಮಾದರಿಯಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಕಾಡಪ್ಪ ಅವರ ಸಾಧನೆಯನ್ನು ಗುರ್ತಿಸಿ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ನೀಡಿರುವುದು ಎಲ್ಲರಿಗೂ ಬಡತನ ಸಾಧನೆಗೆ ಅಡಕಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹಿಂದೂ ಬೋವಿ ಸಮಾಜದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಗಾಡೀವಡ್ಡರ ಹೇಳಿದರು.

ಶಿಲ್ಪಿ ಕಾಡಪ್ಪ ಪರಶುರಾಮ ಗಾಡೀವಡ್ಡರ ಅವರೂ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ಪಡೆದ ಹಿನ್ನಲೆ ಬೋವಿ ಸಮಾಜದ ಮುಖಂಡರುಗಳು ಶುಕ್ರವಾರ (ನ. 6) ರಂದು ಘಟಪ್ರಭಾ ಪ್ರವಾಸ ಮಂದಿರದಲ್ಲಿ ನಡೆದ ವಿಶೇಷ ಸತ್ಕಾರ ಸಮಾರಂಭದಲ್ಲಿ ಅವರೂ ಹೇಳಿದರು.

ಅಧ್ಯಕ್ಷರಾದ ಲಕ್ಷ್ಮಣ ಗಾಡೀವಡ್ಡರ ಅವರು ಮಾತನಾಡುತ್ತ ಬೋವಿ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜದ ಯುವ ಪೀಳಿಗೆಗೆ ಕಾಡಪ್ಪ ಅವರು ಸ್ಫೂರ್ತಿಯಾಗಿದ್ದಾರೆ. ಏಕೆಂದರೆ ಯುವ ಪೀಳಿಗೆ ಬಡತನ ಇದೆ ಎಂಬ ಕಾರಣಕ್ಕೆ ಹಲವಾರು ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ.

ಕಷ್ಟ ಪಟ್ಟಾಗ ಮಾತ್ರ ಸುಖ ಹಾಗೂ ಸಾಧನೆ ಸಾಧ್ಯ ಎಂಬುದನ್ನು ಕಾಡಪ್ಪ ಗಾಡೀವಡ್ಡರ ಅವರು ತೋರಿಸಿಕೊಟ್ಟಿದ್ದಾರೆ. ಅವರ ಒಂದು ಜೀವನದ ದಾರಿ ಯುವ ಪೀಳಿಗೆಗೆ ಮಾರ್ಗದರ್ಶನ ಕೊಡಲಿದೆ ಎಂದು ಅವರು ಹೇಳಿದರು.

ಹಿಂದೂ ಬೋವಿ ಸಮಾಜದ ಗೋಕಾಕ್ ತಾಲೂಕಾ ಅಧ್ಯಕ್ಷರಾದ ಬರಬಣ್ಣ ನಾಗಪ್ಪ, ಗೋವಿಂದ ಗಾಡೀವಡ್ಡರ ಶಿಂದಿಕುರಬೇಟ, ಕಲ್ಲೊಳ್ಳೆಪ್ಪಾ ಗಾಡೀವಡ್ಡರ ದುಪದಾಳ, ಲಗಮಣ್ಣ ಗಾಡೀವಡ್ಡರ, ಅಶೋಕ ಗಾಡೀವಡ್ಡರ, ಮೋಹನ್ ಬಂಡಿವಡ್ಡರ, ರಾಜು ಗಾಡೀವಡ್ಡರ ಘಟಪ್ರಭಾ, ಓಂಕಾರ್ ಬಂದಿವಡ್ಡರ ಗೋಕಾಕ್, ಆನಂದ್ ಗಾಡೀವಡ್ಡರ ಕೊಣ್ಣೂರ, ಸಂಜು ಗಾಡೀವಡ್ಡರ ಪಮ್ಮಂದಿನ್ನಿ, ಸುಭಾಸ್ ಗಾಡೀವಡ್ಡರ ಸಂಗನಕೇರಿ ಹಾಗೂ ಹಲವು ಮುಖಂಡರುಗಳು ಉಪಸ್ಥಿತರಿದ್ದರು.

ಕಾಡಪ್ಪ ಪರಶುರಾಮ ಗಾಡೀವಡ್ಡರ ಅವರ ಜೀವನ

ಶಿಲ್ಪಿ ಕಾಡಪ್ಪಾ ಪರಶುರಾಮ ಗಾಡಿವಡ್ಡರ 24 ಫೆಬ್ರುವರಿ 1973 ರಲ್ಲಿ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಜನಿಸಿದರು. ಇವರಿಗೆ ಬಾಲ್ಯದಲ್ಲಿಯೇ ಚಿತ್ರಕಲೆ ತುಂಬಾ ಆಸಕ್ತಿ ಇತ್ತು. ಇವರ ತಂದೆಯವರಿಗೆ ಒಟ್ಟು 6 ಜನ ಮಕ್ಕಳು, 4 ಗಂಡು, 2 ಹೆಣ್ಣು, ಇವರ ಪ್ರಾಥಮಿಕ ಶಾಲೆ ಓದುವಾಗ ಮನೆಯಲ್ಲಿ ತುಂಬಾ ಬಡತನವಿತ್ತು. ಆಗ ಹತ್ತನೆಯ ತರಗತಿ ತೇರ್ಗಡೆಯ ನಂತರ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟದಿಂದ ಓದಲು ಆಗಲಿಲ್ಲ ಅನಿವಾರ್ಯವಾಗಿ ಕಲ್ಲು ಕೆತ್ತನೆ ಕೆಲಸಕ್ಕೆ ಸೋದರ್ ಮಾವಂದಿರ ಕಡೆ ಹೋಗಬೇಕಾಯಿತು.

ಇವರ ಒಂದು ಜ್ಯಾಪಕ ಶಕ್ತಿ ಹೇಗಿತ್ತು ಎಂದರೆ ಕೇವಲ ಒಂದೇ ವರ್ಷದಲ್ಲಿ ಮೂರ್ತಿ ಕೆತ್ತುವ ಕಳೆಯನ್ನು ಕಲೆತು ಮೂರ್ತಿ ಕೆತ್ತನೆ ಪ್ರಾರಂಭಿಸಿದರು. ಚಿಕ್ಕ ಪುಟ್ಟ ಕೆಲಸಗಳನ್ನು ಅತಿ ಆಸಕ್ತಿಯಿಂದ ಪ್ರಾರಂಭಿಸಿದರು. ಹಾಗೆಯೇ ಇವರ ಕಲೆಗೆ ಜನ ಮನ್ನನ್ನೇ ದೊರೆಯುತ್ತಾ ಹೋಯಿತು. ಇವರ ಕಲೆಯನ್ನು ಕಂಡು ಸ್ವಗ್ರಾಮ ಕೊಣ್ಣೂರಿನ ಆರಾಧ್ಯ ದೇವರು ಶ್ರೀ ಕಾಡಸಿದ್ದೇಶ್ವರ ಮಹಾದ್ವಾರ ಕಟ್ಟಡ ನಿರ್ಮಾಣ ಕಾರ್ಯವನ್ನು ಮ.ಘ.ಚ ಡಾ.ಶ್ರೀ ಅದೃಶ್ಯ ಗುರು ಸಿದ್ಧೇಶ್ವರ ಮಹಾ ಸ್ವಾಮೀಜಿಯವರು ಹಾಗೂ ಊರಿನ ಗುರು ಹಿರುಯರು ಹಾಗೂ ಎಲ್ಲಾ ಸಮಸ್ತ ನಾಗರಿಕ ಬಂಧುಗಳು ಸೇರಿ ಕಟ್ಟಡದ ಜವಾಬ್ದಾರಿಯನ್ನು ಕಾಡಪ್ಪಾವರಿಗೆ ವಹಿಸಿಕೊಟ್ಟರು.

ಮಹಾದ್ವಾರ ಕಟ್ಟಡದ ನಿರ್ಮಾಣದಲ್ಲಿ ಅರಳಿದ ಶಿಲ್ಪಕಲೆಯ ಕೆತ್ತನೆಯ ಭವ್ಯತೆಯನ್ನು ನೋಡಿ ಜನರ ಮನ ಸೆಳೆಯಿತು. ಮಹಾದ್ವಾರ ತುಂಬಾ ಸುಂದರವಾಗಿ ನಿರ್ಮಿಸಿದ್ದ ಕಾಡಪ್ಪ ಇವರು ಕ್ರಮೇಣ 30 ರಿಂದ 50 ಜನರಿಗೆ ಶಿಲ್ಪಕಲೆಯ ತರಬೇತಿ ಕೊಡುತ್ತಾ ಬಂದರು. ಇವರ ಕಲೆಯನ್ನು ಕಂಡು ಶ್ರೀ ಮಾನ್ಯ ಘಣರಾಜ್ಯ ಸರಕಾರ 2003 ನೇ ಸಾಲಿನ “ಕುಶಲಕಲಾ ಪ್ರಶಂಸನ” ಪತ್ರವನ್ನು ನೀಡಿ ಗೌರವಿಸಿತು.

ತದನಂತರ ಕೂಡಲ ಸಂಗಮದಲ್ಲಿ 2006 ನೇ “ಬಸವ ಜ್ಯೋತಿ ರಾಜ್ಯ ಪ್ರಶಸ್ತಿ”ಯನ್ನು ನೀಡಿ ಗೌರವಿಸಿತ್ತು ಹಾಗೂ ಹುಕ್ಕೇರಿ ಶ್ರೀ ಹಿರೇಮಠದ 2014 ನೇ “ಸದ್ಭಾವನ ಪ್ರಶಸ್ತಿ”ಯನ್ನು ನೀಡಿ ಗೌರವಿಸಿತ್ತು. ನಂತರ ಜಿಲ್ಲಾ ಮಟ್ಟದ “ಶ್ರೀ ನಿಧಿ” ಪುರಸ್ಕಾರ ನೀಡಿ ಗೌರವಿಸಿದರು. ಹೀಗೆ ಅನೇಕ ಹಲವಾರು ಪ್ರಶಸ್ತಿಗಳು ಇವರಿಗೆ ದೊರಕಿವೆ ಹಾಗೆ ಹಲವಾರೂ ಸಂಘ ಸಂಸ್ಥೆಗಳು ಕಲಾವಿದರನ್ನು ಗೌರವಿಸುತ್ತಿದೆ.

ಇವರ ಶಿಲ್ಪಕಲೆಯ ಜೀವನ ಮುನ್ನೆಡೇಯುತ ಇವಾಗ ಕರ್ನಾಟಕ & ಮಹಾರಾಷ್ಟ್ರ ಸೇರಿ 60 ಕ್ಕೂ ಹೆಚ್ಚು ಮೇಲ್ಪಟ್ಟ ದೇವಸ್ಥಾನ, ಮಹಾದ್ವಾರ, ಮಾನಸ್ತಂಭ, ಜೈನಮಂದಿರ ಹಾಗೂ ಅನೇಕ ಮೂರ್ತಿ ಕೆತ್ತನೆಗಳನ್ನು ನಿರ್ಮಿಸಿದರು. ಇವರ ಅದ್ಬುತವಾದ ಕಲೆಗೆ ಜನರ ಪ್ರೀತಿ ಮೆಚ್ಚುಗೆಯನ್ನು ಪಡೆದರು. ಇದಿಗ ಶ್ರೀ ಮಾನ್ಯ ಘಣತೆವ್ಯತ್ತ ಕರ್ನಾಟಕ ಸಕಾರವು ಶಿಲ್ಪಿ ಕಾಡಪ್ಪಾ ಪರಶುರಾಮ ಗಾಡಿವಡ್ಡರ ಇವರ ಕಲೆಯನ್ನು ಗುರಿತಿಸಿ 2026 ನೇ ಸಾಲಿನ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”ಯನ್ನು ನೀಡಿ ಗೌರವಿಸಿತು.

*ಶಿಲ್ಪಿ ಕಾಡಪ್ಪ ಗಾಡೀವಡ್ಡರ ಅವರ ಸಹೋದರ ಯಲ್ಲಪ್ಪ ಗಾಡೀವಡ್ಡರ*

ನಮ್ಮ ಕುಟುಂಬ ಕಾಡುಬಡತನ ಕುಟುಂಬ, ತಂದೆ ಒಬ್ಬರು ದುಡಿದು 12 ಜನ ಕುಟುಂಬದ ಸದಸ್ಯರನ್ನು ಸಾಕಬೇಕಿತ್ತು. ಇಂತಹ ಸಂದೀಗ್ನ ಪರಸ್ಥಿತಿಯಲ್ಲಿ ನಮ್ಮ ಅಣ್ಣ ಕಾಡಪ್ಪ ಅವರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ನಮ್ಮ ಸೋದರ ಮಾವನ ಹತ್ತಿರ ಶಿಲ್ಪಕಲೇ ಕೆಲಸಕ್ಕೆ ಹೋದರು. ಅವರು ಮನೆಯ ಪರಸ್ಥಿತಿ ನೋಡಿ ದುಡಿಯಲು ಪ್ರಾರಂಭಿಸಿದರು. ಇದರಿಂದ ಅವರು ಕುಟುಂಬಕ್ಕೆ ಆಧಾರವಾದರೂ.

ಅವರ ಜ್ಞಾನದ ಶಕ್ತಿ ಎಷ್ಟಿತ್ತು ಎಂದರೆ ಕೇವಲ ಎರಡೇ ವರ್ಷದಲ್ಲಿ ಶಿಲ್ಪ ಕಾಲ ದೇವಿಯನ್ನು ಒಳಿಸಿಕೊಂಡರು. ನಮಗೆ ಮೊದಲು ದೇವಸ್ಥಾನದ ಕಟ್ಟಡದ ಕಾರ್ಯ ಬಂದಿದ್ದು, ಗೋಕಾಕ್ ತಾಲೂಕಿನ ಮಾಣಿಕವಾಡಿಯಲ್ಲಿ.

ಮಾಣಿಕವಾಡಿ ಗ್ರಾಮದ ಮುಖಂಡರುಗಳು ನಮ್ಮನು ನಂಬಿ ಚಿಕ್ಕ ದೇವಸ್ಥಾನದ ಗರ್ಭಗುಡಿ ನಿರ್ಮಾಣ ಕಾರ್ಯ ನಮಗೆ ನೀಡಿದ್ದು, ನಮ್ಮ ಅಣ್ಣನ ಜೀವನದ ಮೊದಲ ಮೈಲುಗಲ್ಲಾಯಿತು.

ನಂತರ ನಮ್ಮ ಅಣ್ಣನ ಜೀವನದ ಶೈಲಿಯೇ ಬದಲಾಯಿತು. ಸುಮಾರು 60 ಕ್ಕೂ ಹೆಚ್ಚು ದೇವಸ್ಥಾನ, ಗರ್ಭಗುಡಿ, ಗೋಪೂರ್, ಜೈನಮಂದಿರ್ ನಿರ್ಮಾಣ ಮಾಡಲು ಇದು ನಮಗೆ ದಾರಿದೀಪವಾಯಿತು.

ವರದಿ: ಸಿದ್ದು ಅರಭಾಂವಿ ಕ್ರಾಂತಿ ಕರ್ನಾಟಕ ನ್ಯೂಸ್–ಬೆಳಗಾವಿ

RELATED ARTICLES
- Advertisment -spot_img

Most Popular

Recent Comments