HomeUncategorizedNewsರೈತ ಮುಖಂಡರಿಗೆ ಹಾಗೂ ಹೋರಾಟಗಾರರಿಗೆ ಮುಕ್ತ ಆಹ್ವಾನವನ್ನು ನೀಡುತ್ತೇನೆ: ಪ್ರಹ್ಲಾದ ಜೋಶಿ 

ರೈತ ಮುಖಂಡರಿಗೆ ಹಾಗೂ ಹೋರಾಟಗಾರರಿಗೆ ಮುಕ್ತ ಆಹ್ವಾನವನ್ನು ನೀಡುತ್ತೇನೆ: ಪ್ರಹ್ಲಾದ ಜೋಶಿ 

ನನಗೆ ಫೆಬ್ರವರಿ 2026ರಲ್ಲಿ ರೈತ ಮುಖಂಡರು ಭೇಟಿಯಾಗಿ, ಕಬ್ಬಿನ ಎಫ್‌ಆರ್‌ಪಿ (FRP) ಬೆಲೆಯನ್ನು ಹೆಚ್ಚಿಸಬೇಕೆಂದು ವಿನಂತಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi ಅವರ ನೇತೃತ್ವದ ಸರ್ಕಾರ ಪ್ರತಿ ವರ್ಷ ಎಫ್‌ಆರ್‌ಪಿಯನ್ನು ಹೆಚ್ಚಿಸುತ್ತಿದ್ದು, ಮೇ ತಿಂಗಳಲ್ಲಿ ಇದನ್ನು ₹365 ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಹ್ಲಾದ ಜೋಶಿ ಅವರು ಹೇಳಿದರು.

ಈ ನಿರ್ಧಾರವನ್ನು ಬೆಲೆ ನಿಗದಿ ಸಮಿತಿ ಹಾಗೂ ರಾಜ್ಯ ಸರ್ಕಾರದ ಕಬ್ಬು ಆಯುಕ್ತರ (Cane Commissioner) ವರದಿ ಮತ್ತು ಶಿಫಾರಸುಗಳನ್ನು ಪರಿಗಣಿಸಿ ತೆಗೆದುಕೊಳ್ಳಲಾಗುತ್ತದೆ.

ಮೇ ತಿಂಗಳ ನಂತರ ಭೇಟಿಯಾಗಲು ನನಗೆ ರೈತ ಬಾಂಧವರಿಂದ ಯಾವುದೇ ವಿನಂತಿ ಬಂದಿಲ್ಲ, ಆದಾಗ್ಯೂ ರೈತರ ವಿನಂತಿಯನ್ನು ಮನ್ನಿಸಿಲ್ಲ ಎಂಬ ಭಾವನೆ ಇದ್ದರೆ ಅದಕ್ಕೆ ವಿನಮ್ರವಾಗಿ ಸ್ಪಷ್ಟನೆ ನೀಡುತ್ತಾ, ಪ್ರತಿ ವರ್ಷದಂತೆ ಈ ಬಾರಿಯೂ ಸೂಕ್ತ ಬೆಲೆ ನೀಡಲಾಗುವುದು.

ರೈತ ಮುಖಂಡರಿಗೆ ಹಾಗೂ ಹೋರಾಟಗಾರರಿಗೆ ಮುಕ್ತ ಆಹ್ವಾನವನ್ನು ನೀಡುತ್ತೇನೆ. ಅವರು ನವದೆಹಲಿಗೆ ಬಂದಲ್ಲಿ ಅವರನ್ನು ಗೌರವದಿಂದ ಸ್ವಾಗತಿಸಿ, ಸಂಬಂಧಿತರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಕ್ಕಾಗಿ ಮೋದಿ ಸರ್ಕಾರ ಸದಾ ಸಿದ್ದ ಎಂದ ಪ್ರಹ್ಲಾದ ಜೋಶಿ

RELATED ARTICLES
- Advertisment -spot_img

Most Popular

Recent Comments