ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಮತ್ತು ಡಿಜಿಟಲ್ ವಂಚನೆಗಳನ್ನು ಎದುರಿಸಲು ಸೈಬರ್ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ರಾಜ್ಯದಲ್ಲಿ DG Cyber Command ರಚಿಸಲಾಗಿದ್ದು, ಸೈಬರ್ ಅಪರಾಧ ತನಿಖೆ, ಡಿಜಿಟಲ್ ಫೊರೆನ್ಸಿಕ್ಸ್, ಸೈಬರ್ ತರಬೇತಿ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ರಾಜ್ಯದ 43 Cyber Economic and Narcotics ಪೊಲೀಸ್ ಠಾಣೆಗಳನ್ನು Cyber Crime Police Stations ಆಗಿ ಮರುನಾಮಕರಣ ಮಾಡಿ ಹೊಸ ವ್ಯವಸ್ಥೆಯಡಿ ತರಲಾಗಿದೆ.
ಇದರ ಜೊತೆಗೆ ಬೆಂಗಳೂರಿನಲ್ಲಿ ಸೈಬರ್ ಸೆಕ್ಯುರಿಟಿ ಕಂಪನಿಗಳ ವಿಸ್ತರಣೆಯೂ ಮುಂದುವರಿದಿದೆ.
N-able 2026ರ ಜೂನ್ನಲ್ಲಿ ಬೆಂಗಳೂರಿನಲ್ಲಿ ಹೊಸ Global Capability Centre (GCC) ಆರಂಭಿಸಿದ್ದು, ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತ ಉದ್ಯೋಗ ಹಾಗೂ ಸಂಶೋಧನಾ ಅವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಿದೆ.
ಇದನ್ನು ಓದಿ: Sonata Softwareನಲ್ಲಿ ಹೊಸ Chief AI Officer ನೇಮಕ
ಸೈಬರ್ ದಾಳಿಗಳು, ಫಿಷಿಂಗ್, ಡೇಟಾ ಕಳವು ಮತ್ತು AI ಆಧಾರಿತ ಹೊಸ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕೇಂದ್ರಗಳ ವಿಸ್ತರಣೆ ಕರ್ನಾಟಕದ ಡಿಜಿಟಲ್ ಭದ್ರತೆ ಮತ್ತು ತಂತ್ರಜ್ಞಾನ ಉದ್ಯೋಗಗಳಿಗೆ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.


