ಕರ್ನಾಟಕವನ್ನು ದೇಶದ ಪ್ರಮುಖ ಡಿಜಿಟಲ್ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 1,000 ಮೆಗಾವಾಟ್ (1 GW) ಸಾಮರ್ಥ್ಯದ ಡೇಟಾ ಸೆಂಟರ್ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಸುಸ್ಥಿರ ಡೇಟಾ ಸೆಂಟರ್ ಪಾರ್ಕ್ಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ರಾಜ್ಯ ಸರ್ಕಾರವು 2026–2031ರ ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿಗೆ ಅನುಮೋದನೆ ನೀಡಿದ್ದು, 2031ರ ವೇಳೆಗೆ ರಾಜ್ಯದ ಒಟ್ಟು ಡೇಟಾ ಸೆಂಟರ್ ಐಟಿ ಸಾಮರ್ಥ್ಯವನ್ನು 1 GWಗೆ ಹೆಚ್ಚಿಸುವ ಗುರಿ ಹೊಂದಿದೆ. ಈ ನೀತಿಗೆ ಸುಮಾರು ₹1,300.45 ಕೋಟಿ ಬಜೆಟ್ ಮೀಸಲಿಡಲಾಗಿದೆ.
ಬೆಂಗಳೂರು – 500 MW
ಹೊಸದಾಗಿ ದೊಡ್ಡ ಪ್ರಮಾಣದ ಡೇಟಾ ಸೆಂಟರ್ ಪಾರ್ಕ್ ಅಭಿವೃದ್ಧಿಪಡಿಸುವ ಯೋಜನೆ.
ಮೈಸೂರು – 200 MW
ಡೇಟಾ ಸೆಂಟರ್ಗಳಿಗೆ ಸೂಕ್ತವಾದ ಜಾಗ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಸುಮಾರು 350 ಎಕರೆ ಜಾಗವನ್ನು ಡೇಟಾ ಪಾರ್ಕ್ ಉದ್ದೇಶಕ್ಕಾಗಿ ಗುರುತಿಸಲಾಗಿದೆ.



