Homeರಾಜ್ಯ"ಕುಂಕುಮ ಕೇಳಿದ್ರೆ ಮಾತ್ರೆ ಕೊಡ್ತಾರೆ“ ಯಲ್ಲಮ್ಮನಗುಡ್ಡದ ಅಂಗಡಿಗಳ ಮೇಲೆ ಅಧಿಕಾರಿಗಳ ಮೇಜರ್ RAID

“ಕುಂಕುಮ ಕೇಳಿದ್ರೆ ಮಾತ್ರೆ ಕೊಡ್ತಾರೆ“ ಯಲ್ಲಮ್ಮನಗುಡ್ಡದ ಅಂಗಡಿಗಳ ಮೇಲೆ ಅಧಿಕಾರಿಗಳ ಮೇಜರ್ RAID

ಬೆಳಗಾವಿ: ಸಮೀಪದ ಯಲ್ಲಮ್ಮನಗುಡ್ಡದ ಕುಂಕುಮ–ಭಂಡಾರ, ಕಿರಾಣಿ ಅಂಗಡಿಗಳಲ್ಲಿ ಔಷಧ ಮಾರಾಟ ಮಾಡಲಾಗುತ್ತಿದೆ!

‘ಯಲ್ಲಮ್ಮನಗುಡ್ಡದಲ್ಲಿ ಇರುವ ಎಲ್ಲ ಅಂಗಡಿಗಳ ಮೇಲೆ ನಾವು ಭಾನುವಾರ ದಾಳಿ ಮಾಡಿದಾಗ, ಕೆಲವು ವರ್ತಕರು ನಿಯಮ ಬಾಹಿರವಾಗಿ ಔಷಧ ಮಾರುತ್ತಿರುವುದು ಗಮನಕ್ಕೆ ಬಂದಿದೆ. ‌

ಔಷಧ ಮಾರಾಟ ಮಾಡಿ ಭಕ್ತರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಅಂಗಡಿಕಾರರಿಗೆ ಸೂಚಿಸಿದ್ದೇವೆ’ ಎಂದು ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪುರ ಸುದ್ದಿಗಾರರಿಗೆ ತಿಳಿಸಿದರು.

‘ಹಲವು ಅಂಗಡಿಗಳಲ್ಲಿ ಮಾರಾಟ ಮಾಡುವ ತಂಪು ಪಾನೀಯಗಳ ಬಾಟಲಿಗಳು ಹಾಗೂ ಆಹಾರ ಪ್ಯಾಕೆಟ್‌ಗಳ ಮೇಲೆ, ಎಕ್ಸ್‌ಪೈರಿ ಡೇಟ್‌ ಇಲ್ಲ. ಕೆಲವರು ಪರವಾನಗಿ ಇಲ್ಲದೆ ಮತ್ತು ಪರವಾನಗಿ ನವೀಕರಿಸದೆ ಹೋಟೆಲ್‌ ನಡೆಸುತ್ತಿದ್ದಾರೆ. ಕೆಲವು ಹೋಟೆಲ್‌ನವರು ಅಡುಗೆಗೆ ಕೊಳೆತ ತರಕಾರಿ ಬಳಸುತ್ತಿದ್ದಾರೆ’ ಎಂದರು.

‘ಕೆಲವರು ವಾಣಿಜ್ಯ ಸಂಕೀರ್ಣದಲ್ಲಿನ ಗೋಡೆ ಒಡೆದು, ನಮ್ಮ ಅನುಮತಿ ಪಡೆಯದೆ ತಮ್ಮ ಅಂಗಡಿಗಳಲ್ಲಿ ಸ್ನಾನಗೃಹ, ಶೌಚಗೃಹ ನಿರ್ಮಿಸಿಕೊಂಡಿದ್ದಾರೆ.

ನಿಯಮ ಮೀರಿ ವ್ಯವಹಾರ ಮಾಡುತ್ತಿರುವವರ ಅಂಗಡಿಗಳ ವಿದ್ಯುತ್‌, ನೀರಿನ ಸಂಪರ್ಕ ಕಡಿತಗೊಳಿಸಿದ್ದೇವೆ. ಇದು ಮುಂದುವರಿದರೆ ಶಿಸ್ತು ಕ್ರಮಕ್ಕೆ ಮುಂದಾಗುತ್ತೇವೆ’ ಎಂದು ತಿಳಿಸಿದರು.

‘ಗುಡ್ಡಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ವಿವಿಧ ವಸ್ತು ಖರೀದಿ ಮಾಡುತ್ತಾರೆ. ಹಾಗಾಗಿ ಯಾವುದೇ ವರ್ತಕರು ಮೋಸ ಮಾಡಬಾರದು’ ಎಂದು ಕೋರಿದರು.

RELATED ARTICLES
- Advertisment -spot_img

Most Popular

Recent Comments