ಬೆಳಗಾವಿ: ನಮ್ಮ ರಾಜದಲ್ಲಿ ನಕಲಿ ಔಷಧ ಮಾರಾಟದ ಜಾಲ ಪತ್ತೆಯಾಗಿರುವ ಆಘಾತಕಾರಿ ಹಿನ್ನೆಲೆಯಲ್ಲಿ, ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ‘ವಿವಾ ಫಾರ್ಮಾ’ ಸಂಸ್ಥೆಯು ಈ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೊಚ್ಚಿಗೆದ್ದು ಹೋರಾಟ ನಡೆಸಿತು.
ಈ ಸಂಬಂಧ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಜ್ಯೋತಿ ಕಾಲೇಜು ಎದುರಿನಲ್ಲಿರುವ ವಿವಾ ಫಾರ್ಮಾ ಕಚೇರಿ ಎದುರು ನೂರಾರು ಕಾರ್ಯಕರ್ತರು ಜಮಾಯಿಸಿ, ಸಂಸ್ಥೆಯ ವಿರುದ್ಧ ಧಿಕ್ಕಾರ ಕೂಗಿ ಉಗ್ರ ಪ್ರತಿಭಟನೆ ಹಾಗೂ ಮುತ್ತಿಗೆ ಹಾಕುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು


