ಹಿಂದಿನಿಂದ ಬಂದು ಪತ್ನಿಗೆ ಚೂರಿ ಹಾಕಿದ ಕುಡುಕ ಪತಿ

ಹಿಂದಿನಿಂದ ಬಂದು ಪತ್ನಿಗೆ ಚೂರಿ ಹಾಕಿದ ಕುಡುಕ ಪತಿ

Feb 26, 2025 | Admin


ಬೆಳಗಾವಿ: ಕುಡುಕ ಪತಿ ಕುಡಿದ ಮತ್ತಿನಲ್ಲಿ ಪತ್ನಿಗೆ ಹಿಂದಿನಿಂದ ಬಂದು ಚಾಕುವಿನಿಂದ ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಉದ್ದವ್ವ ಪತಿಯಿಂದ ಹಲ್ಲೆಗೊಳಗಾದ ಪತ್ನಿ ಗಂಭೀರವಾಗಿ ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕುಡುಕ ಗಂಡನ ಕಾಟಕ್ಕೆ ಬೇಸತ್ತ ಪತ್ನಿ ತವರು ಮನೆಗೆ ತೆರಳಿದ್ದಳು. ತವರು ಮನೆಯವರೊಂದಿಗೆ ಸಂತೆಗೆಂದು ಗಾಡಿಯಲ್ಲಿ ಪಾಶ್ಚಾಪುರಕ್ಕೆ ಬಂದಿದ್ದ ಸಂದರ್ಭದಲ್ಲಿ ಮತ್ತೊಂದು ವಾಹನದಲ್ಲಿ ಬಂದ ಪತಿ ಹಾಲಪ್ಪ, ಪತ್ನಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಪತ್ನಿಗೆ ಹಿಂದಿನಿಂದ ಬಂದು ಚಾಕು ಇರಿದು ಎಸ್ಕೇಪ್ ಆಗಿದ್ದಾನೆ.