ಕಂಕಣವಾಡಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಪ್ರತಾಪ ಅಣ್ಣಾ ಪಾಟೀಲ್

ಕ್ರಾಂತಿ ಕರ್ನಾಟಕ ನ್ಯೂಸ್
ಕಂಕಣವಾಡಿ: ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಹಲವು ಸಮಸ್ಯೆಗಳನ್ನು ಆಲಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರಕಾಶ ಹುಕ್ಕೇರಿ ಉಪಾಧ್ಯಕ್ಷ ರಾಮನಾಯಿಕ ನಾಯ್ಕ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆಲವು ಕಾಮಗಾರಿಗಳಿಗೆ ರಾಷ್ಟ್ರೀಯ JDS ಉಪಾದ್ಯಕ್ಷರಾದ ಪ್ರತಾಪ ಅಣ್ಣಾ ಪಾಟೀಲ್ ಹಾಗೂ ಯುವ ಕೇಸರಿ ಶಿವರಾಜ ಅಣ್ಣಾ ಪಾಟೀಲ್ ಇವರ ಹಸ್ತದಿಂದ ಇಂದು ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸರ್ವ ಸದಸ್ಸೇರು ಹಾಗು ಪಟ್ಟಣದ ಗಣ್ಯರಾದ ಮಾಹಾದೇವ ಗದಾಡಿ, ಕೆ ಬಿ ದೇಸಾಯಿ, ಡಾ.ಗೋಪಾಲ ಪೂಜೇರಿ, ಲಕ್ಷ್ಮೀಕಾಂತ ದೇಸಾಯಿ, ಸಿದ್ದಪ್ಪ ಹುಕ್ಕೇರಿ, ಶಿವಾನಂದ ಹಿರೇಮಠ, ರಾಮಪ್ಪ ಹುಕ್ಕೇರಿ, ವಸಂತ ಪೂಜೇರಿ, ಬಸು ಪೂಜೇರಿ, ಸದಾಶಿವ ನಿಡೋಣಿ, ಹಾಲಪ್ಪ ಪೂಜೇರಿ, ಸದಾ ಪಿರಗಿ, ಹಾಗು ಬಜರಂಗದಳ ಕಾರ್ಯಕರ್ತರು ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು.
