ಲೋಡಿಂಗ್ ಅನ್-ಲೋಡಿಂಗ್ ರಾಜ ಮಟ್ಟದ ಬೃಹತ್ ಸಮ್ಮೇಳನ

ಕರ್ನಾಟಕ ಪುಡ್ ಅಂಡ್ ಸಿವಿಲ್ ಸಪ್ರೈ ಕಾರ್ಪೊರೇಷನ್ (Karnataka Food and Civil Supplies Corporation) ನ ಲೋಡಿಂಗ್ ಮತ್ತು ಅನ್-ಲೋಡಿಂಗ್ ಯೂನಿಯನ್ ನ ಕಾರ್ಮಿಕರ ರಾಜ್ಯ ಮಟ್ಟದ ಬೃಹತ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದೆ.
ಆಹಾರ ನಿಗಮದ ವ್ಯಾಪ್ತಿಯಲ್ಲಿ ಸುಮಾರು 233 ಗೌಡನ್ ಗಳಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಯೋಜನೆಯನ್ನು ತಮ್ಮ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ಅರ್ಹ ಫಲಾನುಭವಿಗೆ ಸರಿಯಾದ ಸಮಯಕ್ಕೆ ಅಕ್ಕಿಯನ್ನು ವಿತರಿಸಲು ಸಹಕಾರಿಯಾಗಲಿದೆ.
ಕಾರ್ಮಿಕರ ಯಾವುದೇ ಬೇಡಿಕೆಗಳಿದ್ದರೂ ಅವುಗಳನ್ನು ನಮ್ಮ ಸರ್ಕಾರದ ಮೂಲಕ ಈಡೇರಿಸಲು ಬದ್ಧವಾಗಿದ್ದೇವೆ ಕಾರ್ಮಿಕ ಕಾಯ್ದೆ ಅನ್ವಯ ಗುರುತಿನ ಚೀಟಿ, ಭವಿಷ್ಯ ನಿಧಿ,ಉದ್ಯೋಗ ಪತ್ರ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ, ಮುಂತಾದ ಬೇಡಿಕೆಗಳನ್ನು ಈಡೇರಿಸಲು ಸಿದ್ಧರಿದ್ದೇವೆ.
ಆಹಾರ ಇಲಾಖೆಯ ಅನ್ನಭಾಗ್ಯ ಯೋಜನೆಯ ಅನುಷ್ಠಾನದಲ್ಲಿ ತಮ್ಮ ಪಾತ್ರ ಪ್ರಮುಖವಾದುದ್ದಾಗಿದ್ದು ತಮ್ಮ ಸೇವೆಗೆ ಶ್ರಮಿಕಯೋಗಿಗಳೆಂದು ಕರೆಯುತ್ತೇನೆ.
ಈಗಾಲೇ ಸರ್ಕಾರದ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದು ನಿಮ್ಮ ಸಂಘಟನೆಯ ಮುಖಂಡರೊಂದಿಗೆ ಸಭೆಯನ್ನು ನಡೆಸಿ ತಮ್ಮ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್. ನಟರಾಜ್, ಅಧ್ಯಕ್ಷರಾದ ಶಿವಶಂಕರ್,ಅಲಿ ಟಿಯುಸಿಸಿ. ಕಾರ್ಯದರ್ಶಿ ಅಲಿ,ಅಂಗನವಾಡಿ ಮಹಾಮಂಡಲದ ಅಧ್ಯಕ್ಷರಾದ ನಾಗರತ್ನಮ್ಮ,ಚಿನ್ನತುಂಬಿ, ಹಾಗೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
