Homeರಾಜ್ಯಬೆಳಗಾವಿಯಲ್ಲಿ KC GlobEd ಕೇಂದ್ರ ಉದ್ಘಾಟನೆ

ಬೆಳಗಾವಿಯಲ್ಲಿ KC GlobEd ಕೇಂದ್ರ ಉದ್ಘಾಟನೆ

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾಗತಿಕ ಮಟ್ಟದ ಶಿಕ್ಷಣಾವಕಾಶಗಳನ್ನು ಒದಗಿಸುವ ಉದ್ದೇಶದಿಂದ KC GlobEd ಸಂಸ್ಥೆಯ ಫ್ರಾಂಚೈಸಿ ಕೇಂದ್ರವು ಬೆಳಗಾವಿಯಲ್ಲಿ ಭವ್ಯವಾಗಿ ಉದ್ಘಾಟನೆಯಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಪ್ರಭಾಕರ ಕೋರೆ ಅವರು ದೀಪ ಬೆಳಗಿಸಿ ಕೇಂದ್ರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿಕ ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಕೆಸಿ ಗ್ಲೋಬ್ಡ್ ಅಂತಹ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದ ಕೌಶಲ್ಯಗಳನ್ನು ನೀಡುತ್ತಿವೆ. ಇದು ಗ್ರಾಮೀಣ ಹಾಗೂ ನಗರ ಯುವಕರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಸಿ ಗ್ಲೋಬ್ಡ್ ಸಂಸ್ಥಾಪಕ ಮತ್ತು ಸಿಇಒ ಕಮಲ ಛಾಬ್ರಾ, ಪ್ರೊ. ಡಾ. ಮನ್ಪ್ರೀತ್ ಸಿಂಗ್ ಮಾತನಾಡಿ ಈ ಕೇಂದ್ರವು ವಿದ್ಯಾರ್ಥಿಗಳಿಗೆ ಯುಎಸ್, ಸಿಪಿಎ, ಸಿಎಂಎ ಸೇರಿದಂತೆ ಫೈನಾನ್ಸ್ ಮತ್ತು ಅಕೌಂಟಿಂಗ್ ಕ್ಷೇತ್ರದ ಅಂತರಾಷ್ಟ್ರೀಯ ಕೋರ್ಸ್‌ಗಳು ಕಲಿಸುವ ಮೂಲಕ ಜಾಗತಿಕ ಉದ್ಯೋಗಾವಕಾಶಗಳಿಗೆ ದಾರಿ ತೋರಿಸುತ್ತದೆ ಎಂದು ಹೇಳಿದರು. ಹಾಗೂ ಲೋನಾರ್ಸ್ ಗ್ರೂಪನ ತಾತ್ಯಾಸಾಹೇಬ ಪಾಟೀಲ ಉಪಸ್ಥಿತರಿದ್ದರು.

ಭಾಗ್ಯನಗರದ ಹರಿಕುಂಜ ಪ್ರದೇಶದಲ್ಲಿ ಆರಂಭಗೊಂಡಿರುವ ಈ ಕೇಂದ್ರವು ವಿದ್ಯಾರ್ಥಿಗಳಿಗೆ ಆಧುನಿಕ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶನ ನೀಡಲಿದೆ. ಬೆಳಗಾವಿ ಮುಖ್ಯಸ್ಥರಾದ ವಿಕಾಸ ಕಲ್ಯಾಣಿ ಅವರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ಉತ್ತರ ಕರ್ನಾಟಕದಲ್ಲಿ ಇಂತಹ ಕೇಂದ್ರಗಳ ಆರಂಭವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ದಾರಿ ತೆರೆದಿದೆ.

ಯುವಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಗುರಿಗಳನ್ನು ಸಾಧಿಸಬೇಕು, ಈ ಕೇಂದ್ರವು ಯುವಕರ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments