ಭಾಲ್ಕಿಯಲ್ಲಿ ಅತ್ಯಾಧುನಿಕ ಆರ್ ಟಿ ಓ ಕಚೇರಿ ನಿರ್ಮಾಣ: ಸಚಿವ ಈಶ್ವರ್ ಕಂಡ್ರೆ

ಭಾಲ್ಕಿ ನಗರದಲ್ಲಿ 5 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು 5 ಕೋಟಿ ಅನುದಾನದೊಂದಿಗೆ ಅತ್ಯಾಧುನಿಕ ಆರ್ ಟಿ ಓ ಕಚೇರಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಈ ಆಧುನಿಕ ಕಟ್ಟಡದಲ್ಲಿ ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಸಚಿವ ಈಶ್ವರ್ ಕಂಡ ಹೇಳಿದರು.
ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸ ಆರ್‌ಟಿಓ ಕಚೇರಿ ಪೂರ್ಣಗೊಂಡ ನಂತರ ಸಾರ್ವಜನಿಕರಿಗೆ ಉತ್ತಮ ಸೇವೆಗಳು ದೊರೆಯಲಿದ್ದು ವಾಹನ ಚಾಲಕರಿಗೆ ಸುಗಮವಾದ ಅನುಕೂಲಗಳನ್ನು ನೀಡಲಿದೆ ಎಂದರು.
