ಕಂಕನವಾಡಿ: ರಾಯಬಾಗ ತಾಲೂಕಿನ ಐತಿಹಾಸಿಕ ಕಂಕನವಾಡಿ ಪಟ್ಟಣದಲ್ಲಿ ಶ್ರೀ ಜಗದ್ಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜಾತ್ರೆಯ ನಿಮಿತ್ತ ಏರ್ಪಡಿಸಲಾಗಿದ್ದ ವಿವಿಧ ರಸವತ್ತಾದ ಷರತ್ತು (ಸ್ಪರ್ಧೆ)ಗಳಿಗೆ ಪೂಜ್ಯ ವೇದಮೂರ್ತಿ ಶ್ರೀಶೈಲ ಬಾಳಯ್ಯ ಮಠಪತಿ ಅವರು ವಿಶೇಷ ಪೂಜೆ ನೆರವೇರಿಸಿದರು.
ಮೋಹನ್ ರಾವ್ ದೇಸಾಯಿ ಹಾಗೂ ಅರ್ಜುನ ನಾಯಕವಾಡಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ವಿವಿಧ ಶರತ್ತು ಸ್ಪರ್ಧೆಗಳಿಗೆ ಅದ್ಧೂರಿ ಚಾಲನೆ ನೀಡಿದರು.
ರೋಮಾಂಚಕ ಶರತ್ತುಗಳ ಜಾತ್ರಾ ಮಹೋತ್ಸವದ ನಿಮಿತ್ತ ಸಾರ್ವಜನಿಕರ ಹಾಗೂ ರೈತರ ಕಣ್ಣುಸೆಳೆಯುವಂತೆ ಹಲವು ಮಾದರಿಯ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು:
ಈ ಸಕಲ ಷರತ್ತು ಸ್ಪರ್ಧೆಗಳನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಮಿಟಿಯ ಪದಾಧಿಕಾರಿಗಳು ಹಾಗೂ ರಾಯಭಾಗ ತಾಲೂಕು ಪೊಲೀಸ್ ಸಿಬ್ಬಂದಿಯವರು ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯಶಸ್ವಿಯಾಗಿ ನಡೆಸಿ ಕೊಟ್ಟರು.
ಸಾವಿರಾರು ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಜಾತ್ರಾ ಮಹೋತ್ಸವದ ರೋಮಾಂಚಕಾರಿ ಸ್ಪರ್ಧೆಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
ವರದಿಗಾರರು ವಿಠ್ಠಲ್ ಭಜಂತ್ರಿ ಕ್ರಾಂತಿ ಕರ್ನಾಟಕ ಬೆಳಗಾವಿ


