ಸಂಸತ್ತಿನ ಮುಂಗಾರು ಅಧಿವೇಶನವು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಪ್ರತಿಭಟನೆ ಹಾಗೂ ಗದ್ದಲದಿಂದ ಗಮನ ಸೆಳೆಯಿತು. ವಿವಿಧ ವಿಚಾರಗಳ ಕುರಿತು ಪ್ರತಿಪಕ್ಷಗಳು ಚರ್ಚೆಗೆ ಒತ್ತಾಯಿಸಿದರೆ, ಸರ್ಕಾರವು ಮಸೂದೆಗಳ ಅಂಗೀಕಾರಕ್ಕೆ ಮುಂದಾಯಿತು. ನಿರಂತರ ಗದ್ದಲದಿಂದ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಕ್ಕೆ ಹಲವು ಬಾರಿ ಅಡ್ಡಿಯಾಯಿತು. ಅಧಿವೇಶನವು ಆಗಸ್ಟ್ 13ರಂದು ಮುಕ್ತಾಯಗೊಂಡಿದ್ದು, 19 ಸಭೆಗಳಲ್ಲಿ 12 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ.


