HomeUncategorizedNewsಕಂಗ್ರಾಳಿಯ ಸಂಗೀತಾ ಪಾಟೀಲ್ ಗೆ ಪ್ರತಿಷ್ಠಿತ ಟೀಚರ್ಸ್ ಬೇಲಾ ಗೌರವ

ಕಂಗ್ರಾಳಿಯ ಸಂಗೀತಾ ಪಾಟೀಲ್ ಗೆ ಪ್ರತಿಷ್ಠಿತ ಟೀಚರ್ಸ್ ಬೇಲಾ ಗೌರವ

ಬೆಳಗಾವಿ: ತಾಲೂಕಿನ ಕಂಗ್ರಾಳಿ ಖುರ್ದ್ ಗ್ರಾಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಇನ್ಪಿನೀಟಿ ಎಜ್ಯುಕೇಶನ್ ಸೆಂಟರ್ ಶ್ರೀಮತಿ ಸಂಗೀತಾ ಪಾಟೀಲ್ ಅವರಿಗೆ ಪ್ರತಿಷ್ಠಿತ ಬೇಲಾ ಟೀಚರ್ಸ್ ಗೌರವ 2026 (Bela Teachers’ Award 2026)’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವುದು, ಉನ್ನತ ಶಿಕ್ಷಣವನ್ನು ಅವರ ಕೈಗೆಟುಕುವಂತೆ ಮಾಡುವುದು ಹಾಗೂ ಇಂದಿನ ಡಿಜಿಟಲ್ ಯುಗಕ್ಕೆ ಅಗತ್ಯವಾದ ಕಂಪ್ಯೂಟರ್ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಗೀತಾ ಪಾಟೀಲ್ ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ಫಿನಿಟಿ ಎಜ್ಯುಕೇಶನ ಆಂಡ್ ರೂರಲ್ ಪೌಂಡೇಶನ ಮೂಲಕ ಕಂಗ್ರಾಳಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣದ ಮೂಲಕ ವಿವಿಧ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಮೂಲಕ ಕಂಪ್ಯೂಟರ್ ಶಿಕ್ಷಣ, ಡಿಜಿಟಲ್ ಕೌಶಲ್ಯ ಹಾಗೂ ಉದ್ಯೋಗಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿದೆ.

ನಗರ ಪ್ರದೇಶಗಳಿಗೆ ತೆರಳಿ ಶಿಕ್ಷಣ ಪಡೆಯಲು ಸಾಧ್ಯವಾಗದ ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ತಮ್ಮದೇ ಊರಿನಲ್ಲಿದ್ದುಕೊಂಡು ಉನ್ನತ ಶಿಕ್ಷಣ ಮುಂದುವರಿಸಲು ಹಾಗೂ ಕಂಪ್ಯೂಟರ್ ಜ್ಞಾನ ಪಡೆಯಲು ಅಗತ್ಯ ಮಾರ್ಗದರ್ಶನ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಂಗ್ರಾಳಿ ಗ್ರಾಮದ ಇನ್ಪಿನಿಟಿ ಎಜ್ಯುಕೇಶನ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

“ಶಿಕ್ಷಣವು ನಗರಗಳಿಗೆ ಮಾತ್ರ ಸೀಮಿತವಾಗದೆ, ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಿಗೂ ತಲುಪಬೇಕು” ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಶೈಕ್ಷಣಿಕ ಸೇವೆಗೆ ದೊರೆತಿರುವ ಈ ಪ್ರಶಸ್ತಿ, ಕಂಗ್ರಾಳಿ ಗ್ರಾಮದ ಹೆಮ್ಮೆಯ ಕ್ಷಣವಾಗಿದೆ.

‘Honouring the Guiding Lights Who Shape Our Future’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ (ಬೇಲಾ ಟೀಚರ್ಸ್ ಗೌರವ 2026) Bela Teachers’ Award 2026 ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 6, 2026ರಂದು ಬೆಳಗಾವಿಯಲ್ಲಿ ನಡೆಯಲಿದೆ.

ಶ್ರೀಮತಿ ಸಂಗೀತಾ ಪಾಟೀಲ್ ಅವರಿಗೆ ದೊರೆತಿರುವ ಈ ಗೌರವವು ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲದೆ, ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಮತ್ತು Infinity Education Centerನ ಶೈಕ್ಷಣಿಕ ಪ್ರಯತ್ನಗಳಿಗೆ ದೊರೆತಿರುವ ಮನ್ನಣೆಯಾಗಿದೆ.

RELATED ARTICLES
- Advertisment -spot_img

Most Popular

Recent Comments