"ಬಿ" ಖಾತಾ ಬೃಹತ್ ಆಂದೋಲನ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ

"ಬಿ" ಖಾತಾ ಬೃಹತ್  ಆಂದೋಲನ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ

Feb 24, 2025 | Admin


ಬೆಳಗಾವಿ: ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಇಂದು ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ವತಿಯಿಂದ "ಬಿ" ಖಾತಾ ಬೃಹತ್  ಆಂದೋಲನ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.

ಈ ಅಭಿಯಾನದ ಉದ್ದೇಶ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ "ಎ" ಖಾತಾ ಮತ್ತು "ಬಿ" ಖಾತಾ ಪಡೆಯಲು ಪ್ರೇರೇಪಿಸುವುದಾಗಿದೆ. ಕನಿಷ್ಠ ದಾಖಲೆಗಳನ್ನು ಸಲ್ಲಿಸಿ , ಈ ಖಾತೆ ಪಡೆದುಕೊಳ್ಳಲು ಇಂದಿನಿಂದ ಅವಕಾಶವಿದ್ದು ಜನರು ಈ ಅಭಿಯಾನದ ಲಾಭವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಈ ವೇಳೆ ನೂತನವಾಗಿ ನೇಮಕಗೊಂಡ ಪೌರಕಾರ್ಮಿಕರಿಗೆ ಹಾಗೂ ತೆರಿಗೆಯನ್ನು ಬಾಕಿ ಉಳಿಸಿಕೊಳ್ಳದೆ ಕಟ್ಟಿದ ಕೆರೆಗೆದಾರರಿಗೂ ಸನ್ಮಾನ ಮಾಡಲಾಯಿತು.